ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಆದರೆ ಆತಿಥೇಯ ಪಡೆ ಆರಂಭಿಕ ಆಘಾತವನ್ನು ಅನುಭವಿಸಿತು. ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಡೇವಿಡ್ ವಾರ್ನರ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ.
ಎರಡನೇ ವಿಕೆಟ್‌ಗೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ವಿಲ್ ಪುಕೋವ್ಸ್ಕಿಗೆ ಲ್ಯಾಬುಶೈನ್ ಜೊತೆಯಾದರು. ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ನೀಡಿದ 2 ಜೀವದಾನಗಳನ್ನು ಬಳಸಿಕೊಂಡ ಪುಕೋವ್ಸ್ಕಿ ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ದಾಖಲಿಸಿದರು.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ನವ್‌ದೀಪ್ ಸೈನಿ ಪುಕೋವ್ಸ್ಕಿ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿ ಯಾದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಮೊದಲ ವಿಕೆಟ್ ಪಡೆಯುವಲ್ಲಿ ಸೈನಿ ಯಶಸ್ವಿಯಾದರು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ನವ್‌ದೀಪ್ ಸೈನಿ ತಲಾ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಸಿಡ್ನಿಯ ಮೊದಲ ದಿನದಾಟದಲ್ಲಿ ಭಾರತದ ಫೀಲ್ಡಿಂಗ್ ವೈಫಲ್ಯ ಆತಿಥೇಯ ಆಸ್ಟ್ರೇಲಿಯಾಗೆ ಉತ್ತಮ ಮೊತ್ತ ದಾಖಲಿಸುವತ್ತ ಆಸಿಸ್ ತಂಡ ಹೆಜ್ಜೆ ಹಾಕಿದೆ.
ಆಸ್ಟ್ರೇಲಿಯಾ ತಂಡದ ಪರವಾಗಿ ಯುವ ಆಟಗಾರ ಲ್ಯಾಬುಶೈನ್ ಅರ್ಧ ಶತಕ ಸಿಡಿಸಿ ಔಟಾಗದೆ ಉಳಿದುಕೊಂಡಿದ್ದರೆ ಸ್ಟೀವ್ ಸ್ಮಿತ್ 31 ರನ್ ಗಳಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.