Thursday, 12th December 2024

ಕೆ.ಎಲ್.ರಾಹುಲ್’ಗೆ ಗಾಯ: ಆಫ್ರಿಕಾ ಸರಣಿಗೆ ಪಂತ್ ನಾಯಕ

ನವದೆಹಲಿ : ಜೂ.9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್‌ ಶಾಕ್‌ ಎದುರಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿ ನೇಮಕಗೊಂಡಿದ್ದ ಕೆ.ಎಲ್.ರಾಹುಲ್ ಗಾಯ ಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.

ಕೆ.ಎಲ್.ರಾಹುಲ್ ಅವರ ಗಾಯವು ಗಂಭೀರವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯ ಭಾಗವಾಗುವು ದಿಲ್ಲ. ಈ ಸರಣಿಗೆ ರಿಷಭ್ ಪಂತ್ ಅವರನ್ನ ಬಿಸಿಸಿಐ ತಂಡದ ನಾಯಕನನ್ನಾಗಿ ನೇಮಿಸಿದೆ.