Saturday, 14th December 2024

ಪಂತ್, ಪೂಜಾರ ಜುಗಲ್’ಬಂದಿ ಅಂತ್ಯ: ರೋಚಕತೆಯತ್ತ ಸಿಡ್ನಿ ಟೆಸ್ಟ್

ಸಿಡ್ನಿ: ತಮ್ಮ ವೀರೋಚಿತ ಬ್ಯಾಟಿಂಗ್ ಸಾಹಸದಿಂದ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಟೀಂ ಇಂಡಿಯಾ ವನ್ನು ಮೇಲಕ್ಕೆತ್ತಿದ್ದು, ಪಂದ್ಯದ ರೋಚಕತೆ ಮುಂದುವರಿದಿದೆ. ಐದು ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದು, ಜಯ ಗಳಿಸಲು ಇನ್ನೂ 118 ರನ್ ಗಳಿಸಬೇಕಿದ್ದು, ಡ್ರಾ ಮಾಡಲು 36 ಓವರ್ ಆಡಬೇಕಿದೆ.

ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.

ಪಂತ್ ಮತ್ತು ಪೂಜಾರ ಶತಕದ ಜೊತೆಯಾಟವಾಡಿದರು. ರಕ್ಷಾಣಾತ್ಮಕವಾಗಿ ಆಡಿದ ಪೂಜಾರ 77 ರನ್ ಗಳಿಸಿ ಔಟಾದರು. ಸದ್ಯ ಹನುಮ ವಿಹಾರಿ ಮತ್ತು ಅಶ್ವಿನ್ ಕ್ರೀಸ್ ನಲ್ಲಿದ್ದಾರೆ. ವಿಹಾರಿ ನಾಲ್ಕು ರನ್ ಗಳಿಸಿದ್ದು, ಅಶ್ವಿನ್ 15 ರನ್ ಗಳಿಸಿ ಆಡುತ್ತಿದ್ದಾರೆ.