Wednesday, 18th September 2024

Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ ಸಂಭ್ರಮ; ಚಿನ್ನ ಗೆದ್ದ ಅವನಿ, ಕಂಚು ಗೆದ್ದ ಮೋನಾ

Paris Paralympics

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ(Paris Paralympics) ಭಾರತ  ಪದಕದ ಖಾತೆ ತೆರೆದಿದೆ. ಅದು ಕೂಡ ಒಂದೇ ದಿನ 2 ಪದಕ ಗೆಲ್ಲುವ ಮೂಲಕ. ಇಂದು(ಶುಕ್ರವಾರ) ನಡೆದ ಮಹಿಳೆಯರ 10 ಮೀಟರ್ ಏರ್‌ ರೈಫಲ್‌ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಭಾರತದ ಶೂಟರ್‌ಗಳಾದ  ಅವನಿ ಲೇಖರಾ ಮತ್ತು ಮೋನಾ ಅಗರ್ವಾಲ್(Mona Agarwal) ಕ್ರಮವಾಗಿ ಚಿನ್ನ ಮತ್ತು ಕಂಚಿನ  ಪದಕಕ್ಕೆ ಗುರಿಯಿಡುವ ಮೂಲಕ ಭಾರತೀಯರಿಗೆ ಡಬಲ್‌ ಸಂಭ್ರಮ ಒದಗಿಸಿದ್ದಾರೆ.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಅವನಿ ಇದೇ ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರು. ಜತೆಗೆ 50 ಮೀ. ಏರ್ ರೈಫಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಅವಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇದೀಗ ಮತ್ತೊಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದಕ ಗೆದ್ದ ಅವನಿ ಲೇಖರಾ ಮತ್ತು ಮೋನಾ ಅಗರ್ವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

ಬೆಳಗ್ಗೆ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಅವನಿ 625.8 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಿದ್ದರು. ಫೈನಲ್‌ನಲ್ಲಿಯೂ ಅಮೋಘ ಪ್ರದರ್ಶನ ತೋರುವ ಮೂಲಕ ಪದಕ ಸಾಧನೆ ಮಾಡಿದ್ದಾರೆ. ಫೈನಲ್‌ನಲ್ಲಿ ಒಂದು ಹಂತದಲ್ಲಿ ಮೂರನೇ ಸ್ಥಾನದಲ್ಲಿದ್ದ ಮೋನಾ ಅಗರ್ವಾಲ್ ಅವರು ಅಗ್ರಸ್ಥಾನಿಯಾಗಿದ್ದ ಅವನಿಯನ್ನು ಕೇವಲ ಒಂದು ಅಂಕದ ಮುನ್ನಡೆಯಿಂದ ಹಿಂದಿಕ್ಕಿ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ, ಅಂತಿಮ ಸುತ್ತಿನಲ್ಲಿ ಕೆಲ ತಪ್ಪುಗಳಿಂದ ಹಿನ್ನಡೆ ಅನುಭವಿಸಿದರು. ಅವನಿ ಮತ್ತೆ ಲಯಕ್ಕೆ ಮರಳಿ ಅಂತಿಮವಾಗಿ 249.7  ಅಂಕ ಗಳಿಸಿ ಪ್ಯಾರಾಲಿಂಪಿಕ್ಸ್‌ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಮೋನಾ 228.7 ಅಂಕದೊಂದಿಗೆ ಕಂಚಿಗೆ ತೃಪ್ತಿಪಟ್ಟರು. ದಕ್ಷಿಣ ಕೊರಿಯಾದ 246.8 ಅಂಕದೊಂದಿಗೆ ಲೀ ಯುನ್ರಿ ಬೆಳ್ಳಿ ಗೆದ್ದರು.

https://x.com/India_AllSports/status/1829463238515597567

ಅಪ್ಪನ ಭರವಸೆಯ ಮಾತುಗಳೇ ಅವನಿಯ  ಈ ಸಾಧನೆಗೆ ಪ್ರಮುಖ ಕಾರಣ. ಗಾಲಿ ಕುರ್ಚಿ ಮೇಲೆ ಕುಳಿತೇ ಕ್ರೀಡಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಳು. ಆರ್ಚರಿ ಹಾಗೂ ಶೂಟಿಂಗ್‌ ಅಭ್ಯಾಸ ಮಾಡಲು ಪ್ರಾರಂಭಿಸಿದಳು. ಕೊನೆಗೆ ಶೂಟಿಂಗ್‌ನಲ್ಲಿಯೇ ಮುಂದುವರೆಯಲು ನಿರ್ಧರಿಸಿದಳು. ಜೀವನದಲ್ಲಿ ಗಟ್ಟಿ ನಿರ್ಧಾರಗಳು, ಸಾಧಿಸುವ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಅವನಿ ಸಾಧನೆ ನಮಗೆಲ್ಲ ಸ್ಫೂರ್ತಿ. ಪ್ರತಿ ದಿನ ಅವಿರತ ಪರಿಶ್ರಮದ ಫಲವಾಗಿ ಒಟ್ಟಾರೆಯಾಗಿ ಮೂರನೇ  ಪದಕಕ್ಕೆ ಕೊರಳೊಡ್ಡಿದ್ದಾಳೆ.

ಬ್ಯಾಡ್ಮಿಂಟನ್‌ನಲ್ಲಿ ನಿತೇಶ್‌ ಕುಮಾರ್‌ಗೆ ಜಯ

ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್‌  ವಿಭಾಗದ ಪಂದ್ಯದಲ್ಲಿ ಭಾರತದ ನಿತೇಶ್‌ ಕುಮಾರ್‌ ಚೀನಾದ ಯಾಂಗ್ ಜಿಯಾನ್ಯುವಾನ್ ಅವರನ್ನು 21-5, 21-11 ನೇರ ಗೇಮ್‌ಗಳಿಂದ ಹಿಮ್ಮಟ್ಟಿಸುವಲ್ಲಿ ಯಶಸ್ವಿಯಾದರು. ಆದರೆ ಇದೇ ವಿಭಾಗದಲ್ಲಿ ಕಣಕ್ಕಿಳಿದ್ದ ಮತೋರ್ವ ಭಾರತೀಯ ಮನೋಜ್‌ ಸರ್ಕಾರ್‌ ಥಾಯ್ಲೆಂಡ್‌ನ ಮೊಂಗ್ಖೋನ್ ಬುನ್ಸನ್ ವಿರುದ್ಧ 19-21, 8-21 ಅಂತರದಿಂದ ಪರಾಭವಗೊಂಡರು. ನಾಳೆ ನಡೆಯುವ ಅಂತಿಮ ಪಂದ್ಯದಲ್ಲಿ ಚೀನಾದ ಯಾಂಗ್ ಜಿಯಾನ್ಯುವಾನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತೀಯನೇ ಆಗಿದ್ದ ನಿತೇಶ್‌ ಕುಮಾರ್‌ ವಿರುದ್ಧ ಸೋಲು ಕಂಡಿದ್ದರು.

Leave a Reply

Your email address will not be published. Required fields are marked *