ಪ್ಯಾರಿಸ್: ಪ್ಯಾರಾಲಿಂಪಿಕ್ಸ್(Paris Paralympics) ಮೊದಲ ದಿನವಾಗಿದ್ದ ನಿನ್ನೆ (ಗುರುವಾರ) ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವಿನ ಸಿಹಿ ಕಂಡಿದ್ದರು. ಇದೀಗ ದ್ವಿತೀಯ ದಿನವಾದ ಶುಕ್ರವಾರವೂ ಗೆಲುವಿನ ನಿರೀಕ್ಷೆಯೊಂದಿಗೆ ಹಲವು ವಿಭಾಗದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್ ಶೂಟಿಂಗ್‌ನಲ್ಲಿ ಅವಳಿ ಪದಕ ಗೆದ್ದಿದ್ದ ಅವನಿ ಲೇಖರ ಇಂದಿನ ಪ್ರಧಾನ ಆಕರ್ಷಣೆಯಾಗಿದ್ದಾರೆ.
ಎಸ್‌ಎಲ್4 ಬ್ಯಾಡ್ಮಿಂಟನ್ ವಿಭಾಗದ ಗುಂಪು ಹಂತದ ಮೊದಲ ಪಂದ್ಯ ಗೆದ್ದು ಬೀಗಿದ್ದ ಕರ್ನಾಟಕ ಮೂಲದ, ಸುಹಾಸ್ ಯತಿರಾಜ್ ಅವರು ಇಂದು ದ್ವಿತೀಯ ಪಂದ್ಯವನ್ನಾಡಲಿದ್ದಾರೆ. ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ಅವರು ಈ ಬಾರಿ ಚಿನ್ನದ ಪದಕದ ನಿರೀಕ್ಷೆಯೊಂದಿಗೆ ಗೆಲುವಿನ ಹೆಜ್ಜೆಯನ್ನಿಟ್ಟಿದ್ದಾರೆ. ಇಂದಿನ ಸ್ಪರ್ಧೆಗಳ ವಿವರ ಇಂತಿದೆ.
ಅಥ್ಲೆಟಿಕ್ಸ್
ಮಹಿಳೆಯರ ಡಿಸ್ಕಸ್ (ಫೈನಲ್): ಕರೀಮ್ ಜ್ಯೋತಿ ದಲಾಲ್, ಸಾಕ್ಷಿ ಕಸಾನ, (ಸಮಯ: ಮಧ್ಯಾಹ್ನ 1.30)
ಮಹಿಳೆಯರ 100 ಮೀ. (ಫೈನಲ್): ಪ್ರೀತಿ ಪಾಲ್. (ಸಮಯ: ಸಂಜೆ 4.45)
ಬ್ಯಾಡ್ಮಿಂಟನ್
ಮಹಿಳೆಯರ ಸಿಂಗಲ್ಸ್ (ಗ್ರೂಪ್ ಹಂತ): ಮಾನಸಿ ಜೋಶಿ, (ಸಮಯ: ಮಧ್ಯಾಹ್ನ 12.00)
ಪುರುಷರ ಸಿಂಗಲ್ಸ್ (ಗ್ರೂಪ್ ಹಂತ): ಮನೋಜ್ ಸರ್ಕಾರ್, (ಸಮಯ: ಮಧ್ಯಾಹ್ನ 1.20, ನಿತೀಶ್ ಕುಮಾರ್, ಸಮಯ: ಮಧ್ಯಾಹ್ನ 2.00),
ಸುಹಾಸ್ ಯತಿರಾಜ್, (ಸಮಯ: ಮಧ್ಯಾಹ್ನ 2.40)
https://x.com/RVCJ_FB/status/1829343078403944530
ಶೂಟಿಂಗ್
ಮಹಿಳೆಯರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಅವನಿ ಲೇಖರ, (ಸಮಯ: ಮಧ್ಯಾಹ್ನ 12.30)
ಪುರುಷರ 10 ಮೀ. ಏರ್ ಪಿಸ್ತೂಲ್: ರುದ್ರಾಂಶ್ ಖಂಡೇಲ್ವಾಲ್, ಮನೀಶ್ ನರ್ವಾಲ್, (ಸಮಯ: ಮಧ್ಯಾಹ್ನ 2.45)
ಮಿಶ್ರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಶ್ರೀಹರ್ಷ ದೇವರೆಡ್ಡಿ, (ಸಮಯ: ಸಂಜೆ 5.00)
ರೋವಿಂಗ್
ಮಿಶ್ರ ಡಬಲ್ಸ್ ಸ್ಕಲ್ಸ್ (ಹೀಟ್): ಅನಿತಾ-ನಾರಾಯಣ ಕೊಂಗನಪಲ್ಲೆ, (ಸಮಯ: ಮಧ್ಯಾಹ್ನ 3.00)
ಟ್ರ್ಯಾಕ್ ಸೈಕ್ಲಿಂಗ್
ಪುರುಷರ ಅರ್ಹತಾ ಸ್ಪರ್ಧೆ: ಅರ್ಷದ್ ಶೈಕ್, (ಸಮಯ: ಸಂಜೆ 4.24)