ಇಂಧೋರ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಿಂದ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿಯಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಿಂದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿಯಲಿದ್ದಾರೆ. 3ನೇ ಪಂದ್ಯವು ಇಂಧೋರ್ ನಲ್ಲಿ ಮಾರ್ಚ್ 1ರಿಂದ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಮಿನ್ಸ್ ಅವರು ಕೌಟುಂಬಿಕ ಕಾರಣದಿಂದ ತವರು ಸಿಡ್ನಿಗೆ ಮರಳಿದ್ದರು. ತಾಯಿಯ ಅನಾರೋಗ್ಯದ ಕಾರಣದಿಂದ ಕಮಿನ್ಸ್ ಅವರಿನ್ನೂ ಸಿಡ್ನಿಯಲ್ಲೇ ಇದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಆಸಿಸ್ ತಂಡದ ಮೂಲಗಳು ತಿಳಿಸಿವೆ. ನನ್ನ ಕುಟುಂಬದೊಂದಿಗೆ ನಾನು ಇಲ್ಲಿರಬೇಕಿದೆ” ಎಂದು ಕಮಿನ್ಸ್ ಹೇಳಿದ್ದಾರೆ.
ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಅವರು ತಂಡವನ್ನು ಮುನ್ನಡೆಸ ಲಿದ್ದಾರೆ. ಎರಡನೇ ಪಂದ್ಯದ ಬಳಿಕ ಸ್ಮಿತ್ ತನ್ನ ಪತ್ನಿ ಡ್ಯಾನಿಯೊಂದಿಗೆ ದುಬೈನಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದು, ಗುರುವಾರ ಸಂಜೆ ದೆಹಲಿಯಲ್ಲಿ ಆಸ್ಟ್ರೇಲಿಯಾ ತಂಡದ ಜತೆ ಸೇರಿಕೊಂಡಿದ್ದಾರೆ.
ಹೇಜಲ್ ವುಡ್ ಮತ್ತು ವಾರ್ನರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ಈ ಮೂರು ಆಟಗಾರರ ಬದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ, ಬದಲಿಗೆ ತಂಡದ ಬೆಂಚ್ ಸ್ಟ್ರೆಂತ್ ಉತ್ತಮವಾಗಿದೆ ಎಂದು ಹೇಳಿದೆ.
ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದ್ದು, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದಿದ್ದ ಮೊದಲೆರಡು ಪಂದ್ಯ ಗಳನ್ನು ಭಾರತ ತಂಡ ಸುಲಭದಲ್ಲಿ ಗೆದ್ದುಕೊಂಡಿತ್ತು.