Saturday, 14th December 2024

ಪಂಜಾಬ್‌ ಕಿಂಗ್ಸ್‌ ಗೆಲ್ಲಲು 168 ರನ್‌ ಗುರಿ

ರ್ಮಶಾಲಾ: ಪಂಜಾಬ್ ಕಿಂಗ್ಸ್ ತಂಡದ ಅಸಾಧಾರಣ ಬೌಲಿಂಗ್ ನಿಂದಾಗಿ, ಚೆನ್ನೈ ಸೂಪರ್‌ ಕಿಂಗ್ಸ್ ಒಂಭತ್ತು ವಿಕೆಟ್ ನಷ್ಟಕ್ಕೆ 167 ಗಳಿಸಿದೆ. ಹಾಗೂ ಪಂಜಾಬ್ ತಂಡಕ್ಕೆ 168 ರನ್‌ ಗುರಿ ನಿಗದಿ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 12 ಆಗುವಷ್ಟರಲ್ಲಿ ಆರಂಭಿಕ ಅಜಿಂಕ್ಯ ರಹಾನೆ

9 ರನ್ ಗಳಿಸಿ ಔಟಾದರು. ಬಳಿಕ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಡೆರಿಲ್ ಮಿಚೆಲ್ ಅರ್ಧಶತಕದ ಜತೆಯಾಟ ನೀಡಿದರು. ಬಳಿಕ ಬಂದ ಶಿವಂ ದುಬೈ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲೂ ಸೊನ್ನೆಗೆ ಔಟಾಗಿದ್ದರು.
ತಂಡದ ಮೊತ್ತ 69 ಆಗುವಷ್ಗಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಕುಂಟುತ್ತಿದ್ದ ಚೆನ್ನೈಗೆ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರ ಬಿರುಸಿನ ಆಟ ಚೇತರಿಕೆ ನೀಡಿತು.  ಒಂಬತ್ತನೇ ವಿಕೆಟ್ ರೂಪದಲ್ಲಿ ಜಡೇಜಾ ಔಟಾಗುವ ಮುನ್ನ 26 ಎಸೆತಗಳಲ್ಲಿ43 ರನ್‌ ಬಾರಿಸಿರು.
ಒಂಬತ್ತನೇ ಸ್ಥಾನದಲ್ಲಿ ಕ್ರೀಸಿಗೆ ಬಂದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ವೇಗಿ ಹರ್ಷಲ್ ಪಟೇಲ್ ಸೊನ್ನೆಗೆ ಔಟ್ ಮಾಡಿದರು.

ಹಾಲಿ ಚಾಂಪಿಯನ್ ತಂಡ ಚೆನ್ನೈ ಪಾಯಿಂಟ್‌ ಪಟ್ಟಿಯಲ್ಲಿ ಅದು 10 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಅವಕಾಶ ಜೀವಂತ ವಾಗಿರಿಸಲು ಗೆಲುವು ಅನಿವಾರ್ಯ. ಏಳನೇ ಸ್ಥಾನದಲ್ಲಿರುವ ಪಂಜಾಬ್‌ ಗೆದ್ದರೆ ಅದೂ ಕ್ಷೀಣ ಅವಕಾಶ ಉಳಿಸಿಕೊಳ್ಳಲಿದೆ.