Saturday, 14th December 2024

ಪಿಸಿಬಿ ಅಧ್ಯಕ್ಷರಾಗಿ ಸೈಯದ್ ಮೊಹ್ಸಿನ್ ರಾಜಾ ನಖ್ವಿ ನೇಮಕ

ರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಸೈಯದ್ ಮೊಹ್ಸಿನ್ ರಾಜಾ ನಖ್ವಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ನಖ್ವಿ ಅವರನ್ನ ಮೂರು ವರ್ಷಗಳ ಅವಧಿಗೆ ಪಿಸಿಬಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸೈಯದ್ ಮೊಹ್ಸಿನ್ ರಾಜಾ ನಖ್ವಿ ಪಿಸಿಬಿಯ 37ನೇ ಖಾಯಂ ಅಧ್ಯಕ್ಷರಾಗಿದ್ದು, ಪಾಕಿಸ್ತಾನ ಸೂಪರ್ ಲೀಗ್ ನ ಇತ್ತೀಚಿನ ಋತುವಿಗೆ ಮುಂಚಿತವಾಗಿ ಅಧಿಕಾರ ವನ್ನ ಪುನರಾರಂಭಿಸಲಿದ್ದಾರೆ.

ಬಿಒಜಿಯನ್ನುದ್ದೇಶಿಸಿ ಮಾತನಾಡಿದ ಸೈಯದ್ ಮೊಹ್ಸಿನ್ ರಾಜಾ ನಖ್ವಿ, “ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಯಾಗಿರುವುದಕ್ಕೆ ನನಗೆ ತುಂಬಾ ಗೌರವ ಮತ್ತು ವಿನಮ್ರತೆ ಇದೆ. ದೇಶದಲ್ಲಿ ಆಟದ ಗುಣಮಟ್ಟವನ್ನ ನವೀಕರಿಸಲು ಮತ್ತು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಳಿತದಲ್ಲಿ ವೃತ್ತಿಪರತೆಯನ್ನು ತರಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ” ಎಂದಿದ್ದಾರೆ.