Friday, 22nd November 2024

PM Modi: ಚುರ್ಮಾ ಸವಿದು ನೀರಜ್‌ ತಾಯಿಗೆ ಭಾವುಕ ಪತ್ರ ಬರೆದ ಮೋದಿ

Neeraj Chopra

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಅವಳಿ ಒಲಿಂಪಿಕ್‌ ಪದಕ ವಿತೇತ, ಭಾರತ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ(Neeraj Chopra) ಅವರ ತಾಯಿ(Neeraj Chopra mother) ಸರೋಜಾದೇವಿಗೆ(Saroj Devi) ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ನೀವು ಮಾಡಿಕೊಟ್ಟ ಚುರ್ಮಾ(ಖಾದ್ಯ) ನನ್ನ ತಾಯಿಯನ್ನು ನೆನಪಿಸಿತು ಎಂದು ಮೋದಿ ಈ ಪತ್ರದಲ್ಲಿ ಬರೆದಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯದ ಬಳಿಕ ಎಲ್ಲ ಕ್ರೀಡಾಪಟುಗಳು ತವರಿಗೆ ಮರಳಿದ್ದರೂ ಕೂಡ ನೀರಜ್‌ ಡೈಮಂಡ್‌ ಲೀಗ್‌ ಸಲುವಾಗಿ ಬ್ರಸೆಲ್ಸ್‌ಗೆ ತೆರಳಿದ್ದರು. ಹೀಗಾಗಿ ಮೋದಿ ಅವರು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಭಾರತಕ್ಕೆ ಮರಳಿರುವ ನೀರಜ್‌ ಅವರನ್ನು ಜಮೈಕಾ ಪ್ರಧಾನಿ ಆ್ಯಂಡ್ರ್ಯೂ ಹಾಲ್ನೆಸ್‌ ಜತೆ ಆಯೋಜಿಸಲಾಗಿದ್ದ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು.

ಇದನ್ನೂ ಓದಿ ‌Virat Kohli: ಬೆಂಗಾಳಿ ಮಾತನಾಡಿದ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್

ಮೋದಿ ಭೇಟಿ ವೇಳೆ ನೀರಜ್‌, ತಮ್ಮ ತಾಯಿ ತಯಾರಿಸಿದ್ದ ಚುರ್ಮಾವನ್ನು ಮೋದಿಗೆ ನೀಡಿದ್ದರು. ಇದನ್ನು ಸವಿದ ಮೋದಿ ನೀರಜ್‌ ತಾಯಿಗೆ ಭಾವನಾತ್ಮಕ ಪಾತ್ರವೊಂದನ್ನು ಬರೆದಿದ್ದಾರೆ. ‘ಸಹೋದರ ನೀರಜ್ ನನ್ನೊಂದಿಗೆ ಈ ಚುರ್ಮಾದ ಬಗ್ಗೆ ಆಗಾಗ ಮಾತನಾಡುತ್ತಿದ್ದರು. ಇಂದು ನಾನು ಅದನ್ನು ತಿಂದು ಭಾವುಕನಾದೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯದ ಈ ಉಡುಗೊರೆ ನನಗೆ ನನ್ನ ತಾಯಿಯನ್ನು ನೆನಪಿಸಿತು. ನೀವು ತಯಾರಿಸಿದ ಆಹಾರ ನೀರಜ್‌ಗೆ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿ ನೀಡುತ್ತದೆ. ಅದೇ ರೀತಿ ನವರಾತ್ರಿ ವೇಳೆ ದೇಶ ಸೇವೆ ಮಾಡಲು ಈ ಚುರ್ಮಾ ನನಗೆ ಶಕ್ತಿ ನೀಡಲಿದೆ’ ಎಂದಿದ್ದಾರೆ.

ನೀರಜ್ ಚೋಪ್ರಾ ಕೆಲ ತಿಂಗಳ ಹಿಂದಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಿಂಪಿಕ್ಸ್‌ ಇತಿಹಾಸದಲ್ಲೇ ವೈಯುಕ್ತಿಕ ವಿಭಾಗದಲ್ಲಿ ಎರಡು ಪದಕ ಗೆದ್ದ ದೇಶದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಾತ್ರರಾಗಿದ್ದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ನೀರಜ್‌ ಅವರ ಬ್ರಾಂಡ್ ಮೌಲ್ಯ ಭಾರೀ ಏರಿಕೆ ಕಂಡಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಹಣಕಾಸು ಸಲಹಾ ಸಂಸ್ಥೆ ಕ್ರೋಲ್‌ನ ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್​ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ.