Friday, 13th December 2024

Virat Kohli : ಆರು ಎಸೆತಕ್ಕೆ 6 ಸಿಕ್ಸರ್‌ ಬಾರಿಸಿದ ಈ ಆಟಗಾರ ಕೊಹ್ಲಿಯ ಬಿಗ್‌ ಫ್ಯಾನ್‌

Virat Kohli

ಬೆಂಗಳೂರು : ದೆಹಲಿಯ ಮೂಲದ ಕ್ರಿಕೆಟಿಗ  ಪ್ರಿಯಾಂಶ್ ಆರ್ಯ (Priyansh Arya) ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಸಾಧನೆ ಮಾಡಿದ್ದರು. ಅವರು ಟೂರ್ನಿಯಲ್ಲಿ  ಮಿಂಚಿನ ಪ್ರದರ್ಶನಕ್ಕಾಗಿ ಗಮನ ಸೆಳೆದಿದ್ದರು. ಅವರು ಆರು ಎಸೆತಕ್ಕೆ ಆರು ಸಿಕ್ಸರ್‌ ಬಾರಿಸುವ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದರು. ಈ ಆಟಗಾರನಿಗೆ ವಿರಾಟ್‌ ಕೊಹ್ಲಿಯೆಂದರೆ (Virat Kohli) ಅಚ್ಚುಮೆಚ್ಚು.  ಜರ್ಸಿ ನಂ.18 ಧರಿಸಿರುವ ಆರ್ಯ, ವಿರಾಟ್ ಕೊಹ್ಲಿಯನ್ನು ತಮ್ಮ ನೆಚ್ಚಿನ ಆಟಗಾರ ಮತ್ತು ಆದರ್ಶ ಎಂದು ಕರೆದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವುದಾಗಿ ಹೇಳಿಕೊಂಡಿದ್ದಾರೆ.

ಕೊಹ್ಲಿಯಂತೆಯೇ ಭಾರತೀಯ ಕ್ರಿಕೆಟ್‌ಗೆ  ಕೊಡುಗೆ ನೀಡಲು ಬಯಸುವ ಯುವ ಪೀಳಿಗೆಯ ಆಟಗಾರರ ಪೈಕಿ ಆರ್ಯ ಹೆಚ್ಚು ಗಮನ ಸೆಳೆದಿದ್ದಾರೆ.  ಕೊಹ್ಲಿಯ ಆಕ್ರಮಣಕಾರಿ ಶೈಲಿಯ ಬಗ್ಗೆ ಮೆಚ್ಚುಗೆ ಮತ್ತು ಅದನ್ನು ಅನುಕರಿಸುವ ತಮ್ಮ ಅಭಿಲಾಷೆಯನ್ನು ಆರ್ಯ ಮುಕ್ತವಾಗಿ ಹೇಳಿದ್ದಾರೆ.  ಐಪಿಎಲ್‌ನಲ್ಲಿ  ಆರ್‌ಸಿಬಿ  ಪರ ಆಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ .

“ವಿರಾಟ್ ಕೊಹ್ಲಿ ನನ್ನ ಫೇವರಿಟ್, ಆರ್‌ಸಿಬಿ ಪರ ಆಡಲು ಬಯಸುತ್ತೇನೆ. ನನ್ನ ನೆಚ್ಚಿನ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು.  ವಿರಾಟ್ ಕೊಹ್ಲಿಯನ್ನು ತುಂಬಾ ಇಷ್ಟಪಡುತ್ತೇನೆ.  ನಾನು ಅವರ ಆಕ್ರಮಣಶೀಲತೆ ಇಷ್ಟಪಡುತ್ತೇನೆ. ನಾನು ಆಕ್ರಮಣಕಾರಿ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಅವರು ನನ್ನ ಆದರ್ಶ” ಎಂದು ಪ್ರಿಯಾಂಶ್‌  ತಿಳಿಸಿದ್ದಾರೆ.

17 ವರ್ಷಗಳಿಗಿಂತಲೂ ಹೆಚ್ಚು ಕಾಲ ಟ್ರೋಫಿ ಗೆಲ್ಲಲು ವಿಫಲಗೊಂಡಿರುವ ಆರ್‌ಸಿಬಿಗೆ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿಯಲು ಸಹಾಯ ಮಾಡಲು  23 ವರ್ಷದ ಆಟಗಾರ  ಬಯಸಿದ್ದಾನೆ.

ಈ ಸುದ್ದಿಯನ್ನೂ ಓದಿ: Mohammed Shami: 34ನೇ ವಸಂತಕ್ಕೆ ಕಾಲಿಟ್ಟ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ

ಒಂದು ಓವರ್‌ನಲ್ಲಿ  ಆರು ಸಿಕ್ಸರ್‌
ಆರ್ಯ ತಮ್ಮ ಅದ್ಭುತ ಹೊಡೆತದಿಂದ ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ ಹೆಚ್ಚು ಪ್ರಭಾವ ಬೀರಿದ್ದರು. ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 602 ರನ್‌ಗಳ ಸಮೇತ  ಗರಿಷ್ಠ ರನ್ ಸ್ಕೋರರ್  ಎನಿಸಿಕೊಂಡಿದ್ದಾರೆ. ಉತ್ತರ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ದೆಹಲಿ ಸೂಪರ್ಸ್ಟಾರ್ಸ್ ಪರ ಆಡಿದ ಅವರು ಆರು ಎಸೆತಕ್ಕೆ ಆರು ಸಿಕ್ಸರ್‌ ಸಿಡಿಸಿದ್ದರು. ಎಡಗೈ ಬ್ಯಾಟ್ಸ್ಮನ್ 12 ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಮನನ್ ಭಾರದ್ವಾಜ್ ಅವರಿಗೆ ಸಿಕ್ಸರ್‌ ದಂಡನೆ ನೀಡಿದ್ದರು.  ಅವರು 50 ಎಸೆತಗಳಲ್ಲಿ 120 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ 2 ನೇ ಶತಕ ಗಳಿಸಿದ್ದರು.

ಎಡಗೈ ಸ್ಪಿನ್ನರ್ ಬೌಲಿಂಗ್ ಮಾಡಲು ಬಂದರೆ, ನಾನು ಅವರ ಮೇಲೆ  ಸಿಕ್ಸರ್‌ ಬಾರಿಸುತ್ತೇನೆ ಎಂಬುದಾಗಿ ನನ್ನ ಮನಸ್ಸಿನಲ್ಲಿತ್ತು. ನಾಲ್ಕನೇ ಸಿಕ್ಸರ್ ನಂತರ, ನಾನು ಆರು ಸಿಕ್ಸರ್‌ಗಳನ್ನು  ಹೊಡೆಯಬಲ್ಲೆ ಎಂದು ಅಂದುಕೊಂಡೆ ಎಂದು ಆರ್ಯನ್‌ ಹೇಳಿದ್ದಾರೆ .

ದಾಖಲೆಯ ಜತೆಯಾಟ

ಡೆಲ್ಲಿ ಸೂಪರ್ಸ್ಟಾರ್ಸ್ ತಂಡದ ನಾಯಕ ಆಯುಷ್ ಬದೋನಿ  55 ಎಸೆತಗಳಲ್ಲಿ 165 ರನ್ ಗಳಿಸಿ ಆರ್ಯ ಅವರೊಂದಿಗೆ ದಾಖಲೆಯ 286 ರನ್ಗಳ ಜೊತೆಯಾಟ  ಹಂಚಿಕೊಂಡರು.  ಉತ್ತರ ಡೆಲ್ಲಿ 196 ರನ್ ಗಳಿಸಲಷ್ಟೇ ಶಕ್ತಗೊಂಡು ಸೋಲೊಪ್ಪಿಕೊಂಡಿತು.