ಟೀಂ ಇಂಡಿಯಾದ ರನ್ ರಾಶಿಗೆ ಉತ್ತರವಾಗಿ, ಎರಡನೇ ಇನ್ನಿಂಗ್ಸ್ ನಲ್ಲಿ ಪ್ರವಾಸಿಗರು ಯಾವುದೇ ಪ್ರತಿರೋಧ ತೋರದೆ ಕೇವಲ 62 ರನ್ನಿಗೆ ಆಟ ಮುಗಿಸಿತು. ಈ ಹೊತ್ತಿಗೆ ಪ್ರವಾಸಿಗರ ಮೊಗದಲ್ಲಿ ಸಂತಸವಿರಲಿಲ್ಲ. ಫಾಲೋ ಆನ್ ಹೇರದೆ, ಮರಳಿ ತಾವೇ ಬ್ಯಾಟಿಂಗ್ ಮಾಡುವುದನ್ನು ವಿರಾಟ್ ನಿರ್ಧರಿಸಿ ದರು. ಇದಕ್ಕೆ ಪ್ರತಿಫಲವಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಈಗಾಗಲೇ ವಿಕೆಟ್ ನಷ್ಟವಿಲ್ಲದೆ ಭರ್ತಿ 50 ರನ್ ಪೇರಿಸಿದ್ದು, 313 ರನ್ ಮುನ್ನಡೆಯಲ್ಲಿದೆ.
ಫೀಲ್ಡಿಂಗ್ ವೇಳೆ ಶುಬ್ಮನ್ ಗಿಲ್ ಗಾಯಗೊಂಡ ಕಾರಣ, ಎರಡನೇ ಇನ್ನಿಂಗ್ಸ್ ಆರಂಭಿಸಲು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಏಕದಿನ ರೀತಿಯಲ್ಲಿ ಬ್ಯಾಟ್ ಬೀಸಿದ ಪೂಜಾರ, 27 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ನಿರ್ಬಂಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಿವೀಸ್ ಪರ ಎಜಾಜ್ ಎಲ್ಲಾ 10 ವಿಕೆಟ್ ಪಡೆದರು. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.