Friday, 22nd November 2024

ಲೋ ಸ್ಕೋರ್‌ ಫೈಟ್‌’ನಲ್ಲಿ ಗೆದ್ದ ಪಂಜಾಬ್ ಕಿಂಗ್ಸ್

ಶಾರ್ಜಾ: ಕಡಿಮೆ ಸ್ಕೋರ್ ಗಳಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ 5 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.

ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವನ್ನು ಕೇವಲ 125 ರನ್ ಗೆ ನಿಯಂತ್ರಿಸಿದ್ದ ಹೈದರಾಬಾದ್ ಸುಲಭ ಸವಾಲು ಪಡೆದಿತ್ತು. ಆದರೆ ಮುಹಮ್ಮದ್ ಶಮಿ(2-14) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸೋಲುಂಡಿತು.

ಸನ್ ರೈಸರ್ಸ್ ಪರ ಆಲ್ ರೌಂಡರ್ ಜೇಸನ್ ಹೋಲ್ಡರ್(ಔಟಾಗದೆ 47) ಕೊನೆ ತನಕ ಹೋರಾಟ ನೀಡಿದರು. ಅಗ್ರ ಕ್ರಮಾಂಕದಲ್ಲಿ ವೃದ್ದಿ ಮಾನ್ ಸಹಾ (31)ಒಂದಷ್ಟು ಪ್ರತಿರೋಧ ಒಡ್ಡಿದರು. ಪಂಜಾಬ್ ರೋಚಕ ಗೆಲುವು ಸಾಧಿಸಲು ಕಾರಣವಾದ ಬೌಲಿಂಗ್ ವಿಭಾಗದಲ್ಲಿ ರವಿ ಬಿಶ್ನೋಯ್ (3-24)ಹಾಗೂ ಅರ್ಷದೀಪ್(1-22)ಇನ್ನು 4 ವಿಕೆಟ್ ಹಂಚಿಕೊಂಡರು.

ಜೇಸನ್ ಹೋಲ್ಡರ್ (19ಕ್ಕೆ 3 ವಿಕೆಟ್, 47*ರನ್) ಆಲ್ರೌಂಡ್ ನಿರ್ವಹಣೆ ನಡುವೆಯೂ ಸನ್‌ರೈಸರ್ಸ್‌ ಹೈದರಾಬಾದ್ ಪಂಜಾಬ್ ಕಿಂಗ್ಸ್ ತಂಡಕ್ಕೆ 5 ರನ್‌ ಗಳಿಂದ ಶರಣಾಯಿತು. ಕಡೇ ಓವರ್‌ನಲ್ಲಿ ಸನ್‌ರೈಸರ್ಸ್‌ ಜಯ ದಾಖಲಿಸಲು 17 ರನ್ ಅವಶ್ಯಕತೆಯಿದ್ದಾಗ ಹೋಲ್ಡರ್, 11 ರನ್ ಕಸಿಯಲಷ್ಟೇ ಶಕ್ತರಾ ದರು. ಇದರಿಂದ 8ನೇ ಸೋಲನುಭವಿಸಿದ ಕೇನ್ ವಿಲಿಯಮ್ಸನ್ ಬಳಗ ಲೀಗ್‌ನಿಂದ ಅಧಿಕೃತವಾಗಿ ಹೊರಬಿದ್ದಿತು. ರೋಚಕ ಜಯ ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಬಳಗ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು.

ಪಂಜಾಬ್ ಕಿಂಗ್ಸ್: 7 ವಿಕೆಟ್‌ಗೆ 125 (ಕೆಎಲ್ ರಾಹುಲ್ 21, ಏಡನ್ ಮಾರ್ಕ್ರಮ್ 27, ಹರ್‌ಪ್ರೀತ್ ಬ್ರಾರ್ 18*, 19ಕ್ಕೆ 3, ಸಂದೀಪ್ ಶರ್ಮ 20ಕ್ಕೆ 1, ಭುವನೇ ಶ್ವರ್ ಕುಮಾರ್ 34ಕ್ಕೆ 1, ರಶೀದ್ ಖಾನ್ 17ಕ್ಕೆ 1, ಅಬ್ದುಲ್ ಸಮದ್ 9ಕ್ಕೆ 1), ಸನ್‌ರೈಸರ್ಸ್‌ ಹೈದರಾಬಾದ್: 7 ವಿಕೆಟ್‌ಗೆ 120 (ಜೇಸನ್ ಹೋಲ್ಡರ್ 47*, ವೃದ್ಧಿಮಾನ್ ಸಾಹ 31, ಮನೀಷ್ ಪಾಂಡೆ 13, ಕೇದಾರ್ ಜಾಧವ್ 12, ರವಿ ಬಿಷ್ಣೋಯಿ 24ಕ್ಕೆ 3, ಮೊಹಮದ್ ಶಮಿ 14ಕ್ಕೆ 2, ಅರ್ಷದೀಪ್ ಸಿಂಗ್ 22ಕ್ಕೆ 1).