ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಇದುವರೆಗೆ ಎಂಟು ಪಂದ್ಯಗಳಿಂದ ಗೆಲುವು ಕಂಡಿರುವುದು ಕೇವಲ ಮೂರರಲ್ಲಿ. ರಾಜಸ್ಥಾನ ರಾಯಲ್ಸ್ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಜಯಿಸಿದೆ. ಅಂಕ ಪಟ್ಟಿಯಲ್ಲಿ ರಾಜಸ್ಥಾನ ಮತ್ತು ಪಂಜಾಬ್ ತಂಡಗಳು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿದೆ.
ಸಂಜು ಸ್ಯಾಮ್ಸನ್, ಕ್ರಿಸ್ ಮಾರಿಸ್, ಎವಿನ್ ಲೆವಿಸ್, ಮಿಲ್ಲರ್, ಕಳೆದ ಸಲ ಯುಎಇಯಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದ ರಾಹುಲ್ ತೇವಟಿಯಾ, ಆಲ್ರೌಂಡರ್ ರಿಯಾನ್ ಪರಾಗ್, ಸ್ಪೀಡ್ಸ್ಟರ್ ಚೇತನ್ ಸಕಾರಿಯಾ, ಜೈದೇವ್ ಉನಾದ್ಕತ್, ಶಂಸಿ, ಮುಸ್ತಫಿಜುರ್ ಅವರಂಥ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿ ರುವ ರಾಜಸ್ಥಾನ್ ಸಾಕಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ.
ಪಂಜಾಬ್ ತಂಡ ಕೆ.ಎಲ್. ರಾಹುಲ್ ಸಾರಥ್ಯವನ್ನು ಮರಳಿ ಪಡೆಯಲಿದೆ. ಡೆಲ್ಲಿ ವಿರುದ್ಧ ಅಗರ್ವಾಲ್ ತಂಡವನ್ನು ಮುನ್ನಡೆಸಿದ್ದರು. ಕ್ರಿಸ್ ಗೇಲ್ ಮತ್ತು ಫ್ಯಾಬಿಯನ್ ಅಲೆನ್ ಪಂಜಾಬ್ನ ಬಿಗ್ ಸ್ಟಾರ್. ಐಡನ್ ಮಾರ್ಕ್ರಮ್ ಸೇರ್ಪಡೆಯಿಂದ ಪಂಜಾಬ್ ಇನ್ನಷ್ಟು ಬಲಿಷ್ಠಗೊಂಡಿದೆ ಶಮಿ, ಆರ್ಷದೀಪ್, ಹೆನ್ರಿಕ್ಸ್, ಜೋರ್ಡನ್, ಬಿಷ್ಣೋಯಿ, ಎಂ. ಅಶ್ವಿನ್, ಪೂರಣ್, ಬ್ರಾರ್ ಅವರೆಲ್ಲ ಪಂಜಾಬ್ನ ಭರವಸೆಯ ಆಟಗಾರರು.