ಗೇಮ್ನ ಆರಂಭಿಕ ಕ್ಷಣಗಳಲ್ಲಿ 10-15 ರಿಂದ ಯು ಫೀಗೆ ಹಿನ್ನಡೆಯಾದ ನಂತರ, ಸಿಂಧು ಪುನರಾಗ ಮನ ಮಾಡಿದರು. ಆದರೆ ಚೀನಿ ಆಟಗಾರ್ತಿ ಮೊದಲ ಗೇಮ್ ಅನ್ನು 21-17 ರಿಂದ ಗೆದ್ದರು.
ಎರಡನೇ ಗೇಮ್ನಲ್ಲಿ ಸಿಂಧು 10-5 ರಿಂದ ಮುನ್ನಡೆ ಸಾಧಿಸಲು ಉತ್ತಮವಾಗಿ ಆರಂಭ ಪಡೆದುಕೊಂಡರು. ಆದರೆ ಎದುರಾಳಿ ಗೇಮ್ನ ದ್ವಿತೀಯಾ ರ್ಧದಲ್ಲಿ ಮರಳಿ ಸಿಂಧುವನ್ನು 21-16 ರಿಂದ ಸೋಲಿಸಿ ಫೈನಲ್ಗೆ ಮುನ್ನಡೆದರು.
ಈ ಸೋಲಿನೊಂದಿಗೆ ಸಿಂಧು ಥಾಯ್ಲೆಂಡ್ ಓಪನ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಫೈನಲ್ನಲ್ಲಿ ಯು ಫೀ ತೈವಾನ್ನ ತೈ ತ್ಸು ಯಿಂಗ್ ಅಥವಾ ಥಾಯ್ಲೆಂಡ್ನ ರಚನೋಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.