Friday, 22nd November 2024

R Ashwin: ಕುಂಬ್ಳೆ ದಾಖಲೆ ಹಿಂದಿಕ್ಕಿದ ಅಶ್ವಿನ್

R Ashwin

ಕಾನ್ಪುರ: ಬಾಂಗ್ಲಾದೇಶ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌(R Ashwin) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ನಜ್ಮೂಲ್ ಹೊಸೈನ್ ವಿಕೆಟ್ ಪಡೆಯುವ ಮೂಲಕ ಏಷ್ಯಾದಲ್ಲಿ 420 ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿದ್ದಾರೆ. ಇದೇ ವೇಳೆ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ (419) ಅವರನ್ನು ಹಿಂದಿಕ್ಕಿದರು. ಏಷ್ಯಾದಲ್ಲಿ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯು ಮುರಳೀಧರನ್ (612) ಅಗ್ರಸ್ಥಾನದಲ್ಲಿದ್ದಾರೆ. ಇದುವರೆಗೆ ಅಶ್ವಿನ್ 102 ಟೆಸ್ಟ್‌ಗಳಲ್ಲಿ 523 ವಿಕೆಟ್ ಉರುಳಿಸಿದ್ದಾರೆ.

ಚೆನ್ನೈಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅಶ್ವಿನ್‌ ಶತಕ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಡೆವಿದ ದಾಖಲೆ ಬರೆದಿದ್ದರು. ಇದೇ ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದ ಸಅಧನೆಯೊಂದಿಗೆ ಶೇನ್‌ ವಾರ್ನ್‌ ದಾಲಲೆ ಸರಿಗಟ್ಟಿದ್ದರು. ಅಶ್ವಿನ್‌ ಮತ್ತು ವಾರ್ನ್‌ 37 ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ. ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 67 ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಅಶ್ವಿನ್‌ 11 ಬಾರಿ 5 ವಿಕೆಟ್‌ ಗೊಂಚಲು ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಥನ್‌ ಲಿಯಾನ್ (10), ಜಸ್‌ಪ್ರೀತ್‌ ಬುಮ್ರಾ (7) ಬಾರಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ IND vs BAN: ಬುಮ್ರಾ ಬೌಲಿಂಗ್‌ ಶೈಲಿ ಹೇಗೆಂದು ತೋರಿಸಿಕೊಟ್ಟ ಕೊಹ್ಲಿ, ಜಡೇಜಾ; ವಿಡಿಯೊ ವೈರಲ್‌

2ನೇ ದಿನವೂ ಮಳೆ ಅಡಚಣೆ

ಭಾರೀ ಮಳೆಯಿಂದ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ(IND vs BAN) ಮತ್ತು ಭಾರತ ನಡುವಣ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ದಿನದ(IND vs BAN Day 2) ಆಟ ಬಹುತೇಕ ರದ್ದುಗಗೊಳ್ಳುವ ಸಾಧ್ಯತೆ ಕಂಡು ಬಂದಿದೆ. 2ನೇ ದಿನವಾದ ಶನಿವಾರ ಬೆಳಗ್ಗೆಯೇ ಕಾನ್ಪುರದಲ್ಲಿ ಮಳೆ ಆರ್ಭಟ ಶುರುವಾಗಿದೆ. ಸಂಪೂರ್ಣವಾಗಿ ಮೈದಾನಕ್ಕೆ ಕವರ್‌ಗಳನ್ನು ಹೊದಿಸಲಾಗಿದೆ. ಶುಕ್ರವಾರ(ಸೆ 27) ಆರಂಭವಾದ ಈ ಟೆಸ್ಟ್‌ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ ಪಡಿಸಿತ್ತು. ಪಂದ್ಯ ಆರಂಭಕ್ಕೂ ಮುನ್ನವೇ ಹವಾಮಾನ ಇಲಾಖೆ ಶೇ.92ರಷ್ಟು ಮಳೆ ಎಚ್ಚರಿಕೆ ನೀಡಿತ್ತು.

ಮೊದಲ ದಿನ ಎಡೆಬಿಡದೆ ಸುರಿದ ಮಳೆಯಿಂದಾಗಿ, ದಿನದ ಆಟವನ್ನು ರದ್ದುಗೊಳಿಸಲಾಗಿತ್ತು. ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಆದರೆ ಇಂದು ಪಂದ್ಯ ನಡೆಯುವುದೇ ಅನುಮಾನ ಎನ್ನುವ ರೀತಿಯಲ್ಲಿ ಮಳೆ ಸುರಿಯುತ್ತಿದೆ. ಮಳೆ ನಿಂತರೂ ಕೂಡ ಮೈದಾನ ಒಣಗುವುದು ಕಷ್ಟ ಸಾಧ್ಯ.