Friday, 22nd November 2024

‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ರಹಾನೆ

ಮೆಲ್ಬೋರ್ನ್: ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ‘ಪಂದ್ಯಶ್ರೇಷ್ಠ ಪ್ರಶಸ್ತಿ’ ರೂಪದಲ್ಲಿ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಜಾನಿ ಮುಲ್ಲಾಘ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 1868ರಲ್ಲಿ ಇಂಗ್ಲೆಂಡ್‌ಗೆ ಮೊಟ್ಟ ಮೊದಲ ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿತ್ತು. ಈ ನೆನಪಿನ ಗೌರವಾರ್ಥವಾಗಿ ಮಾಜಿ ನಾಯಕನ ಹೆಸರಿನಲ್ಲಿ ಈ ಪದಕ ನೀಡಲಾಗಿದೆ. ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಆಟಗಾರನಿಗೆ ‘ಮುಲ್ಲಾಘ್‌ ಪದಕ’ ನೀಡಲು ಈ ಹಿಂದೆ ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿಸಿತ್ತು.

ಈ ಕುರಿತಾಗಿ ಬಿಸಿಸಿಐ ಟ್ವೀಟ್‌ ಮಾಡಿದೆ.