ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ಗಾಗಿ ಭಾರತ ತಂಡ (Team India) ಸಜ್ಜಾಗುತ್ತಿದೆ. ಬೆಂಗಳೂರಿನಲ್ಲಿ ಕೊಹ್ಲಿ, ರೋಹಿತ್, ಪಂತ್ ಸೇರಿದಂತೆ ಆಟಗಾರರು ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ, ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಟೀಮ್ ಇಂಡಿಯಾದ ಶಿಬಿರಕ್ಕೆ ಭೇಟಿ ನೀಡಿದ್ದರು. ಅಕ್ಟೋಬರ್ 16 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ಪ್ರಾರಂಭವಾಗಲಿದ್ದು, ದ್ರಾವಿಡ್ ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಚಾಟ್ ಮಾಡುತ್ತಿರುವುದು ಕಂಡುಬಂದಿದೆ. ಆಟಗಾರರು ಮಾಜಿ ಆಟಗಾರನಿಂದ ಟಿಪ್ಸ್ ಪಡೆದುಕೊಂಡಿದ್ದಾರೆ.
Rahul Dravid with captain Rohit Sharma, Rishabh pant and Virat Kohli during today's practice session at Chinnaswamy stadium.🥹❤️
— 𝐑𝐮𝐬𝐡𝐢𝐢𝐢⁴⁵ (@rushiii_12) October 13, 2024
So happy to see Rohit's Rahul bhai with him 🧿🥹 pic.twitter.com/P4MAIPo5Cu
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಬೆಂಗಳೂರಿನಲ್ಲಿ ವಾತಾವರಣವು ಆರಾಮದಾಯಕವಾಗಿದೆ ಎಂದು ತೋರುತ್ತದೆ. ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತಮ್ಮ ಪ್ರದರ್ಶನವನ್ನು ಕಿವೀಸ್ ವಿರುದ್ಧವೂ ಪುನರಾವರ್ತಿಸಲು ತಯಾರಿ ನಡೆಸುತ್ತಿದೆ.
ಕೆಂಪು ಚೆಂಡಿನಲ್ಲಿ ಭಾರತದ ಭರ್ಜರಿ ಫಾರ್ಮ್
ಟೀಮ್ ಇಂಡಿಯಾದ ಬಗ್ಗೆ ಮಾತನಾಡುವುದಾದರೆ ತಂಡ ಇತ್ತೀಚಿನ ದಿನಗಳಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅವರು ಇತ್ತೀಚೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಕ್ಲೀನ್ ಸ್ವೀಪ್ ಮಾಡಿತ್ತು. ಚೆನ್ನೈ ಮತ್ತು ಕಾನ್ಪುರದಲ್ಲಿ ಅದ್ಭುತ ಗೆಲುವುಗಳನ್ನು ಗಳಿಸಿತ್ತು. ಚೆನ್ನೈನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಆರಾಮದಾಯಕ ಗೆಲುವಿನ ನಂತರ, ಸುಮಾರು ಮೂರು ದಿನಗಳ ಕಾಲ ಮಳೆಯಿಂದ ಹಾಳಾದ ಪಂದ್ಯದಲ್ಲಿ ಕೊನೇ ಎರಡು ದಿನಗಳಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು. ಆ ಎರಡು ಗೆಲುವುಗಳೊಂದಿಗೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಿಗುವಂತೆ ಮಾಡಿದೆ. ಆದರೆ ಡಬ್ಲ್ಯುಟಿಸಿ ಫೈನಲ್ ತಲುಪಲು ಇನ್ನೂ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗಿದೆ.
ಇದನ್ನೂ ಓದಿ: Mahela Jaywardene : ಮಹೇಲಾ ಜಯವರ್ಧನೆ ಮುಂಬೈ ಇಂಡಿಯನ್ಸ್ ನೂತನ ಕೋಚ್
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಬೇಕು. ಮುಂಬರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ ಒಂದು ಗೆಲುವು ದಾಖಲಿಸಬೇಕು. ಹಾಗೆ ಮಾಡಲು ವಿಫಲವಾದರೆ ಅರ್ಹತೆ ಪಡೆಯಲು ಇತರ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಸಮೀಪಿಸುತ್ತಿದ್ದಂತೆ, ರೋಹಿತ್ ಶರ್ಮಾ ನೇತೃತ್ವದ ಭಾರತ ಉತ್ತಮ ಪ್ರದರ್ಶನ ನೀಡಿ ಗೆಲುವಿನ ಆರಂಭವನ್ನು ಪಡೆಯುವ ಭರವಸೆಯಲ್ಲಿದೆ.