ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಮ್ಮೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
2024ರ ಜೂನ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವರೆಗೆ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
“ಇತ್ತೀಚೆಗೆ ಮುಕ್ತಾಯಗೊಂಡ ODI ವಿಶ್ವಕಪ್ ನಂತರ ದ್ರಾವಿಡ್ ಅವರ ಮುಖ್ಯ ಕೋಚ್ ಹುದ್ದೆಯ ಒಪ್ಪಂದದ ಅವಧಿ ಪೂರ್ಣಗೊಂಡಿತ್ತು. ಇದಾದ ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂದು ಚರ್ಚೆ ನಡೆಸಲಾಗಿತ್ತು. ಎಲ್ಲರ ಒಪ್ಪಿಗೆ ಪಡೆದು ನಂತರ ರಾಹುಲ್ ದ್ರಾವಿಡ್ ಅವರನ್ನೇ ಮುಖ್ಯ ಕೋಚ್ ಆಗಿ ಒಪ್ಪಂದವನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಈ ಒಪ್ಪಂದವನ್ನು ದ್ರಾವಿಡ್ ಅವರು ಒಪ್ಪಿದ್ದಕ್ಕಾಗಿ ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಮಾತನಾಡಿ, ಟೀಮ್ ಇಂಡಿಯಾದೊಂದಿಗೆ ಕಳೆದ ಎರಡು ವರ್ಷಗಳು ಪಯಣ ಸ್ಮರಣೀಯವಾಗಿದೆ. ಈ ಪಯಣದಲ್ಲಿ ಭಾರತ ಏರಿಳಿತಗಳನ್ನು ಕಂಡಿದೆ. ಪ್ರಯಾಣದುದ್ದಕ್ಕೂ, ಗುಂಪಿನೊಳಗಿನ ಬೆಂಬಲ ಮತ್ತು ಒಡನಾಟವು ಅಸಾಧಾರಣವಾಗಿದೆ. ಈ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ. ಮತ್ತೊಮ್ಮ ನನ್ನನ್ನು ಮುಖ್ಯ ಕೋಚ್ ಹುದ್ದಗೆ ಮರು ನೇಮಕ ಮಾಡಿದ್ದಕ್ಕಾಗಿ BCCI ಮತ್ತು ಪದಾಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿ, “ಇದು ಒಳ್ಳೆಯ ನಿರ್ಧಾರ ಏಕೆಂದರೆ ಮುಂದಿನ ವರ್ಷ ಟಿ -20 ವಿಶ್ವಕಪ್ ಇರುವುದರಿಂದ ಇದು ಉತ್ತಮ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ 2021ರ ನವೆಂಬರ್ ತಿಂಗಳಲ್ಲಿ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ 2 ವರ್ಷದ ಅವಧಿಗೆ ಬಿಸಿಸಿಐ ನೇಮಕ ಮಾಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್ ನಂತರ ಮುಖ್ಯ ಕೋಚ್ ಹುದ್ದೆಯ ಅವಧಿ ಪೂರ್ಣಗೊಂಡಿತ್ತು. ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಊಹಪೋಹಗಳಿಗೆ ತೆರೆ ಬಿದ್ದಿದೆ.