Sunday, 15th December 2024

ಮೂರನೇ ಪಂದ್ಯಕ್ಕೆ ಮಳೆ ಅಡ್ಡಿ: ಓವರುಗಳ ಸಂಖ್ಯೆ ಕಡಿತ

ಟ್ರಿನಿಡಾಡ್‌: ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿ ವಶಪಡಿಸಿಕೊಂಡಿರುವ ಪ್ರವಾಸಿ ಟೀಂ ಇಂಡಿಯಾಕ್ಕೆ ಮೂರನೇ ಹಾಗೂ ಏಕದಿನ ಪಂದ್ಯದಲ್ಲಿ ಆರಂಭಿಕರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಅರ್ಧಶತಕದ ನಂತರ ಸುರಿದ ಮಳೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ.

ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ಬುಧವಾರ ನಡೆಯು ತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು.

ಧವನ್ ಮತ್ತು ಗಿಲ್ ಮೊದಲ ವಿಕೆಟ್ ಗೆ 113 ರನ್ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಧವನ್ 74 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 58 ರನ್ ಬಾರಿಸಿ ಔಟಾದರೆ, ಶುಭಮನ್ ಗಿಲ್ 65 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 51 ರನ್ ಬಾರಿಸಿ ಔಟಾಗದೇ ಉಳಿದರು.

ಭಾರತ ತಂಡ 1 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿದ್ದಾಗ ಸುರಿದ ಮಳೆಯಿಂದ ಪಂದ್ಯಕ್ಕೆ ತಡೆ ಬಿದ್ದಿದೆ. ಶ್ರೇಯಸ್ ಅಯ್ಯರ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಉಭಯ ತಂಡಗಳಿಗೆ ತಲಾ ೪೦ ಓವರುಗಳ ಆಟ ನಿಗದಿಪಡಿಸಲಾಗಿದೆ.