ಮುಂಬೈ: ಉದ್ಘಾಟನಾ ಸೀಸನ್‌ನಲ್ಲಿ ದಿವಂಗತ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ವಿಜಯಶಾಲಿಯಾಗಿತ್ತು. ಅದರ ನಂತರ ನಾಯಕ, ಆಟಗಾರರನ್ನು ಬದಲಿಸಿ ಎಷ್ಟೇ ಪ್ರಯೋಗ ಮಾಡಿದರೂ ಮತ್ತೊಮ್ಮೆ ಕಪ್ ಗೆಲ್ಲುವ ಕನಸು ನನಸಾಗಲಿಲ್ಲ.
ಅಲ್ಲದೇ ತಂಡದ ಹೊಸ ನಾಯಕನ ನೇಮಕಕ್ಕೆ ಮುಂದಾಗಿದ್ದಾರೆ ಎಂಬ ವರದಿಗಳಿವೆ. ಇದರೊಂದಿಗೆ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ತಂಡ ತೊರೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರಾಜಸ್ಥಾನ್ ರಾಯಲ್ಸ್ ಸಂಜು ಸ್ಯಾಮ್ಸನ್ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೇಜರ್ ಮಿಸ್ಸಿಂಗ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯುವುದು ಖಚಿತ ಎನ್ನಲಾಗುತ್ತಿದೆ.
ಸಂಜು ಸ್ಯಾಮ್ಸನ್ 2018 ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಅವರು 2021 ರಿಂದ ಆ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವ ದಲ್ಲಿ, ಆರ್‌ಆರ್ ಒಂದೇ ಒಂದು ಬಾರಿ ಫೈನಲ್ ತಲುಪಿತು. ಒಟ್ಟಾರೆಯಾಗಿ, ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 167 ಪಂದ್ಯಗಳನ್ನು ಆಡಿದ್ದಾರೆ ಮತ್ತು 4419 ರನ್ ಗಳಿಸಿದ್ದಾರೆ.