Sunday, 15th December 2024

ರಣಜಿ ಟ್ರೋಫಿ ವಿಜೇತರಿಗೆ ₹ 5 ಕೋಟಿ ನಗದು ಪ್ರಶಸ್ತಿ

ವದೆಹಲಿ : ದೇಶಿ ಕ್ರಿಕೆಟ್ ಟೂರ್ನಿಗಳ ಪ್ರಶಸ್ತಿ ಮೊತ್ತವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹೆಚ್ಚಳ ಮಾಡಿದೆ. ರಣಜಿ ಟ್ರೋಫಿ ವಿಜೇತರು ಇನ್ನು ಮುಂದೆ ₹ 5 ಕೋಟಿ ನಗದು ಪ್ರಶಸ್ತಿ ಗಳಿಸುವರು.

ರಣಜಿ ವಿಜೇತರು ಇಲ್ಲಿಯವರೆಗೆ ₹ 2 ಕೋಟಿ ಪಡೆಯುತ್ತಿದ್ದರು. ರನ್ನರ್ಸ್ ಅಪ್ ತಂಡಕ್ಕೆ ₹ 3 ಕೋಟಿ ಹಾಗೂ ಸೆಮಿಫೈನಲ್‌ನಲ್ಲಿ ಸೋತವರಿಗೆ ₹ 1 ಕೋಟಿ ನೀಡಲಾಗುವುದು.

‘ದೇಶಿ ಟೂರ್ನಿಗಳ ಪ್ರಶಸ್ತಿ ಮೊತ್ತ ಹೆಚ್ಚಿಸಲಾಗಿದೆ. ಮಹಿಳಾ ವಿಭಾಗದ ವಿಜೇತರಿಗೂ ₹ 6 ಲಕ್ಷದಿಂದ ₹ 50 ಲಕ್ಷ ದವರೆಗೆ ಹೆಚ್ಚಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಇರಾನಿ ಕಪ್‌ ವಿಜೇತರಿಗೆ ₹ 50 ಲಕ್ಷ, ದುಲೀಪ್ ಟ್ರೋಫಿಗೆ ₹ 1 ಕೋಟಿ, ದೇವಧರ್ ಟ್ರೋಫಿಗೆ ₹ 40 ಲಕ್ಷ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿಜೇತರಿಗೆ ₹ 80 ಲಕ್ಷ ಲಭಿಸಲಿದೆ.