Wednesday, 11th December 2024

ಮೊದಲ ಓವರ್ ನಲ್ಲಿ ಉನಾದ್ಕತ್ ಹ್ಯಾಟ್ರಿಕ್ ಸಾಧನೆ

ರಾಜಕೋಟ್‌: ಮಧ್ಯಮ ವೇಗಿ ಜೈದೇವ್ ಉನಾದ್ಕತ್ ವರ್ಷದ ಮೊದಲ ರಣಜಿ ಪಂದ್ಯ ದಲ್ಲಿ ಮೊದಲ ಓವರ್ ನಲ್ಲಿ ಹ್ಯಾಟ್ರಿಕ್ ಹಾಗೂ 2 ನೇ ಓವರ್ ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ದೆಹಲಿ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ನಾಯಕ ಉನದ್ಕತ್ ಮೊದಲ ಓವರ್ ನ 3, 4 ಮತ್ತು 5ನೇ ಎಸೆತದಲ್ಲಿ ಧ್ರುವ ಶೌರಿ, ವೈಭವ್ ರಾವಲ್ ಮತ್ತು ಯಶ್ ಡಲ್ ಅವರ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು.

ಡೆಲ್ಲಿ ತಂಡದ ನಾಯಕ ಯಶ್ ಡಲ್ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿ ದರು. ಆದರೆ ಜೈದೇವ್ ಮಾರಕ ದಾಳಿಗೆ ತತ್ತರಿಸಿತು.

ಮೊದಲ ಓವರ್ ನಲ್ಲಿ ಹ್ಯಾಟ್ರಿಕ್ ಪಡೆದಿದ್ದ ಜೈದೇವ್ 2ನೇ ಓವರ್ ನಲ್ಲಿ ಮತ್ತೆರಡು ವಿಕೆಟ್ ಪಡೆದು 5 ವಿಕೆಟ್ ಗೊಂಚಲು ಸಾಧನೆ ಮಾಡಿದರು. ಇದು ಜೈದೇವ್ ಗೆ 21ನೇ ಬಾರಿ ಒಲಿದ 5 ವಿಕೆಟ್ ಸಾಧನೆ.

Read E-Paper click here