ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದ 2ನೇ ದಿನ ಪೃಥ್ವಿ ಶಾ 379 ರನ್ ಗಳಿಸಿ ಔಟಾ ಗುವ ಮೊದಲು, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ 377 ರನ್ ದಾಖಲೆ ಮುರಿದರು.
1990-91ರ ರಣಜಿ ಟ್ರೋಫಿ ಋತುವಿನಲ್ಲಿ ಸಂಜಯ್ ಮಂಜ್ರೇಕರ್ ಹೈದರಾಬಾದ್ ವಿರುದ್ಧ 377 ರನ್ ಗಳಿಸಿದ್ದರು. ಇದೀಗ ಮುಂಬೈ ಬ್ಯಾಟರ್ ಪೃಥ್ವಿ ಶಾ 33 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದರು.
ಮುಂಬೈ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅಂತಿಮವಾಗಿ ಅಸ್ಸಾಂ ಆಲ್‌ರೌಂಡರ್ ರಿಯಾನ್ ಪರಾಗ್ ಅವರ ಎಸೆತದಲ್ಲಿ ಔಟಾಗುವ ಮುನ್ನ ಕೇವಲ 383 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು 49 ಬೌಂಡರಿಗಳ ಸಮೇತ 379 ರನ್ ಬಾರಿಸಿದರು.
ಪೃಥ್ವಿ ಶಾ ಔಟಾಗುತ್ತಿದ್ದಂತೆಯೇ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಮೂರನೇ ವಿಕೆಟ್‌ಗೆ 401 ರನ್‌ಗಳ ಜೊತೆಯಾಟ ಕೊನೆಗೊಂಡಿತು. ಪೃಥ್ವಿ ಶಾ 107 ಎಸೆತಗಳಲ್ಲಿ ಶತಕ, 235 ಎಸೆತಗಳಲ್ಲಿ ದ್ವಿಶತಕ ಮತ್ತು 326 ಎಸೆತಗಳಲ್ಲಿ ತ್ರಿಶತಕ ಪೂರೈಸಿದ್ದರು
Read E-Paper click here