Sunday, 8th September 2024

ಅತ್ಯಾಚಾರದ ಆರೋಪ: ಶ್ರೀಲಂಕಾ ಕ್ರಿಕೇಟರ್‌ ಧನುಷ್ಕ ಗುಣತಿಲಕ ಬಂಧನ

ಸಿಡ್ನಿ: ಅತ್ಯಾಚಾರದ ಆರೋಪದ ಮೇಲೆ ಶ್ರೀಲಂಕಾ ಬ್ಯಾಟರ್ ಧನುಷ್ಕ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಸಿಡ್ನಿಯ 29 ವರ್ಷದ ಮಹಿಳೆ ಗುಣತಿಲಕ ಅವರ ಮೇಲೆ ಅತ್ಯಾಚಾರದ ದೂರು ನೀಡಿದ್ದಾರೆ. ರೋಸ್‌ ಬೇಯಲ್ಲಿ ಘಟನೆ ನಡೆದಿರು ವುದು ಬೆಳಕಿಗೆ ಬಂದಿದ್ದು, ಗುಣತಿಲಕ ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಮಾಡಿದ್ದರು.

2015 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನ ಮೆಂಟ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಅತ್ಯಾಚಾರ ಆರೋಪ ಬಂದಿರುವ ಗುಣತಿಲಕ ಅವರನ್ನು ಆಸ್ಟ್ರೇಲಿಯಾದಲ್ಲೇ ಬಿಟ್ಟು ಉಳಿದ ಆಟಗಾರರು ಶ್ರೀಲಂಕಾಕ್ಕೆ ತೆರಳಿದ್ದಾರೆ.

error: Content is protected !!