Friday, 22nd November 2024

ನ್ಯೂಜಿಲೆಂಡಿಗೆ ಸೋತರೂ, ದಾಖಲೆ ಬರೆದ ರಶೀದ್ ಖಾನ್

ಅಬುಧಾಬಿ: ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಸೋಲುವ ಮೂಲಕ ಅಫ್ಘಾನಿಸ್ತಾನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ರಶೀದ್ ಖಾನ್ ಕೇವಲ 27 ರನ್​ ನೀಡಿ 1 ವಿಕೆಟ್ ಪಡೆದಿದ್ದರು. ಈ ವಿಕೆಟ್​ನೊಂದಿಗೆ ಇದೀಗ ಟಿ20 ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದ ವಿಶ್ವದ ನಾಲ್ಕನೇ ಬೌಲರ್ ಎನಿಸಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತೀ ವೇಗವಾಗಿ ಟಿ20ಯಲ್ಲಿ 400 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್​ನ ಡ್ವೇನ್ ಬ್ರಾವೋ ಹೆಸರಿನಲ್ಲಿತ್ತು. ಬ್ರಾವೋ 364 ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದರು. ಇದೀಗ ಕೇವಲ 289 ಪಂದ್ಯಗಳಲ್ಲಿ 400 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಬ್ರಾವೋ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ರಶೀದ್ ಖಾನ್ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಡ್ವೇನ್ ಬ್ರಾವೋ (553), ಸುನಿಲ್ ನರೈನ್ (425) ಮತ್ತು ಇಮ್ರಾನ್ ತಾಹಿರ್ (420) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಎಲೈಟ್ ಪಟ್ಟಿಗೆ ರಶೀದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ.

23 ವರ್ಷದ ರಶೀದ್ ಖಾನ್ ಒಂದಷ್ಟು ಅಫ್ಘಾನಿಸ್ತಾನ್ ಪರ ಟಿ20 ಕ್ರಿಕೆಟ್ ಹಾಗೂ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಹೀಗಾಗಿ ಬ್ರಾವೋ ಅವರ ವಿಶ್ವ ದಾಖಲೆ ಮುರಿಯುವ ಸಾಧ್ಯತೆಯಿದೆ. ಸದ್ಯ ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ 553 ವಿಕೆಟ್ ಉರುಳಿಸುವ ಮೂಲಕ ಬ್ರಾವೋ ಅಗ್ರಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಕೇವಲ 20 ಹಾಗೂ 25 ವಿಕೆಟ್​ಗಳ ಮೂಲಕ ನರೈನ್ ಹಾಗೂ ತಾಹಿರ್ ರಶೀದ್ ಖಾನ್ ಮುಂದಿದ್ದಾರೆ.