ಕಾಬುಲ್: ಇದೇ ತಿಂಗಳ ಕೊನೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸೋಮವಾರ ಅಫಘಾನಿಸ್ತಾನ ತಂಡ ಪ್ರಕಟಗೊಂಡಿದೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್(Rashid Khan) ದೀರ್ಘ ಸಮಯದ ಬಳಿಕ ಟೆಸ್ಟ್ ತಂಡಕ್ಕೆ ಮರಲಿದ್ದಾರೆ. ವಿಶೇಷವೆಂದರೆ 2021ರಲ್ಲಿ ಜಿಂಬಾಬ್ವೆ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದ ಅವರು ಇದೀಗ ಜಿಂಬಾಬ್ವೆ ವಿರುದ್ಧವೇ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.
ಇದುವರೆಗೆ 5 ಟೆಸ್ಟ್ ಪಂದ್ಯವನ್ನಾಡಿರುವ ರಶೀದ್ ಖಾನ್ 9 ಇನಿಂಗ್ಸ್ನಿಂದ 106 ರನ್ ಮತ್ತು 34 ವಿಕೆಟ್ ಕಿತ್ತಿದ್ದಾರೆ. “ರಶೀದ್ ಖಾನ್ ಅವರು ಟೆಸ್ಟ್ ತಂಡಕ್ಕೆ ಮರಳಿರುವುದು ತಂಡದ ಬಲ ಹೆಚ್ಚುವಂತೆ ಮಾಡಿದೆ” ಎಂದು ಮುಖ್ಯ ಆಯ್ಕೆಗಾರ ಅಹ್ಮದ್ ಶಾ ಸುಲಿಮಂಖಿಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಶೀದ್ ಖಾನ್ ದಾಂಪತ್ಯ ಜೀನಕ್ಕೆ ಕಾಲಿರಿಸಿದ್ದರು. ಕಾಬೂಲ್ನಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿತ್ತು. ರಶೀದ್ ಖಾನ್ ನಾಯಕತ್ವದಲ್ಲಿ ಆಫ್ಘಾನ್ ತಂಡವು ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿ ಐತಿಹಾಸಿಕ ಸಾಧನೆ ಮಾಡಿತ್ತು. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ತಂಡ ಅಮೋಘ ಪ್ರದರ್ಶನ ತೋರಿತ್ತು.
ರಶೀದ್ ಖಾನ್ ಅಫಘಾನಿಸ್ತಾನ ತಂಡದ ಪರ 96 ಟಿ20 ಪಂದ್ಯಗಳನ್ನಾಡಿ 161 ವಿಕೆಟ್ ಮತ್ತು 467 ರನ್ ಬಾರಿಸಿದ್ದಾರೆ. ಏಕದಿನದಲ್ಲಿ 108 ಪಂದ್ಯಗಳಿಂದ 1346 ರನ್ ಮತ್ತು 195 ವಿಕೆಟ್ ಕೆಡವಿದ್ದಾರೆ. 5 ಟೆಸ್ಟ್ ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ ರಶೀದ್ ಈವರೆಗೆ 121 ಪಂದ್ಯಗಳನ್ನಾಡಿ 149 ವಿಕೆಟ್ ಕಲೆಹಾಕಿದ್ದಾರೆ. ಪ್ರಸಕ್ತ ಗುಜರಾತ್ ಟೈಟಾನ್ಸ್ ತಂಡದ ಆಟಗಾರನಾಗಿದ್ದಾರೆ.
ಇದನ್ನೂ ಓದಿ AUS vs IND 3rd Test: ಮೂರನೇ ಟೆಸ್ಟ್; ಸೋಲಿನ ಭೀತಿಯಲ್ಲಿ ಭಾರತ
ಉಭಯ ತಂಡಗಳ ನಡುವಣ ಸರಣಿ ಡಿಸೆಂಬರ್ 26 ರಂದು ಬುಲವಾಯೊದಲ್ಲಿ ಪ್ರಾರಂಭವಾಗುವ ಎರಡು-ಟೆಸ್ಟ್ ಸರಣಿಗೆ ಅಫ್ಘಾನಿಸ್ತಾನವು ಏಳು ಅನ್ಕ್ಯಾಪ್ಡ್ ಆಟಗಾರರನ್ನು ಆಯ್ಕೆ ಮಾಡಿದೆ, ಆಲ್ರೌಂಡರ್ ಇಸ್ಮತ್ ಆಲಂ, ಎಡಗೈ ಸ್ಪಿನ್ನರ್ ಜಹೀರ್ ಶೆಹ್ಜಾದ್ ಮತ್ತು ಎಡಗೈ ವೇಗಿ ಬಶೀರ್ ಅಹ್ಮದ್. ಹಶ್ಮತುಲ್ಲಾ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ, ಇಕ್ರಮ್ ಅಲಿಖೈಲ್, ಅಫ್ಸರ್ ಝಜೈ, ರಿಯಾಜ್ ಹಸನ್, ಸೇದಿಕುಲ್ಲಾ ಅಟಲ್, ಅಬ್ದುಲ್ ಮಲಿಕ್, ಬಹೀರ್ ಶಾ ಮಹಬೂಬ್, ಇಸ್ಮತ್ ಆಲಂ, ಅಜ್ಮತುಲ್ಲಾ ಒಮರ್ಜಾಯ್,ಜಹೀರ್ ಖಾನ್, ಜಿಯಾ ಉರ್ ರೆಹಮಾನ್ ಅಕ್ಬರ್, ಜಹೀರ್ ಶೆಹಜಾದ್, ರಶೀದ್ ಖಾನ್, ಯಾಮಿನ್ ಅಹ್ಮದ್ಝೈ, ಬಶೀರ್ ಅಹ್ಮದ್ ಅಫ್ಘಾನ್, ನವೀದ್ ಜದ್ರಾನ್, ಫರೀದ್ ಅಹ್ಮದ್ ಮಲಿಕ್.