Saturday, 14th December 2024

ಆರಂಕಿಯಿಂದ ಸೋತ ಪಂಜಾಬ್, ಪ್ಲೇ ಆಫ್’ಗೆ ನೆಗೆದ ಆರ್‌ಸಿಬಿ

ಶಾರ್ಜಾ: ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಭರ್ಜರಿ ಆಟದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಗೆ ಪ್ರವೇಶ ಮಾಡಿದೆ.

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 164 ರನ್ ಕಲೆ ಹಾಕಿದೆ. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪಂಜಾಬ್ ಪರ ಮಾಕ್ರಮ್ ಮತ್ತು ಹೆನ್ರಿಕ್ಸ್ ತಲಾ 3 ವಿಕೆಟ್ ಪಡೆದರು.

ಆರ್ ಸಿಬಿ ಪರ ವಿರಾಟ್ ಕೊಹ್ಲಿ 25, ದೇವದತ್ತ್ ಪಡಿಕ್ಕಲ್ 40, ಗ್ಲೇನ್ ಮ್ಯಾಕ್ಸ್ ವೆಲ್ 57 ಮತ್ತು ಎಬಿ ಡಿವಿಲಿಯರ್ಸ್ 23 ರನ್ ಗಳಿಸಿದರು. ಪಂಜಾಬ್ ಪರ ಕೆಎಲ್ ರಾಹುಲ್ 39, ಮಾಯಾಂಕ್ ಅಗರವಾಲ್ 57, ಮಾರ್ಕ್ರಾಮ್ 20 ಮತ್ತು ಶಾರೂಖ್ ಖಾನ್ 16 ರನ್ ಬಾರಿಸಿದರು.

ಗುರಿ ಬೆನ್ನಟ್ಟಿದ ರಾಹುಲ್ ಪಡೆ ಉತ್ತಮ ಆರಂಭ ಮಾಡಿದರೂ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನು ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ರಾಹುಲ್ 39 ಮತ್ತು ಮಾಯಾಂಕ್ ಅಗರವಾಲ್ 57 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರಾದರೂ ಆರ್ ಸಿ ಬಿ ಬೌಲಿಂಗ್ ಎದುರು ಉಳಿದ ಆಟಗಾರರಿಗೆ ಜಯ ತಂದು ಕೊಡುವುದು ಸಾಧ್ಯವಾಗಲಿಲ್ಲ. ಆರ್ ಸಿ ಬಿ ಪರ ಚಹಲ್ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೂರ್ನಿಯಲ್ಲಿ ಆರ್ ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಪ್ಲೇ ಆಫ್ ಗೆ ಎಂಟ್ರಿಕೊಟ್ಟಿದೆ. ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶ ಹೊಂದಿದ್ದ ಕೆ.ಎಲ್ .ರಾಹುಲ್ ನಾಯಕತ್ವದ ಪಂಬಾಬ್‌ ಕಿಂಗ್ಸ್‌ ಗೆ ಈ ಸೋಲು ಭಾರೀ ಹೊಡೆತ ನೀಡಿದೆ.

ಆರ್‌ಸಿಬಿ: 7 ವಿಕೆಟ್‌ಗೆ 164

ಪಂಜಾಬ್ ಕಿಂಗ್ಸ್: 6 ವಿಕೆಟ್‌ಗೆ 158