ಬೆಂಗಳೂರು: ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿದೆ. ಐಪಿಎಲ್ ಹರಾಜಿನ ಈ ಸಿದ್ಧತೆಗಳ ಮಧ್ಯೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ದಿನವನ್ನು ಸಂಭ್ರಮಿಸುತ್ತಿದೆ.
ಐಪಿಎಲ್ನಲ್ಲಿ ಪ್ರಮುಖ ಫ್ರಾಂಚೈಸಿಯಾಗಿರುವ ಆರ್ಸಿಬಿಗೆ ಇಂದು ಸ್ಥಾಪನೆಯಾದ ದಿನವಾಗಿದೆ. 13 ವರ್ಷಗಳ ಹಿಂದೆ ಆರ್ಸಿಬಿ ಫ್ರಾಂಚೈಸಿಯ ಆರಂಭವಾಗಿತ್ತು.
2008ರಲ್ಲಿ ಕ್ರಿಕೆಟ್ನ ಅತಿದೊಡ್ಡ ಲೀಗ್ ಟೂರ್ನಮೆಂಟ್ ಐಪಿಎಲ್ಅನ್ನು ಬಿಸಿಸಿಐ ಆರಂಭಿಸಿತು. ಆ ಆರಂಭಿಕ ಟೂರ್ನಿ ಯಿಂದಲೇ ಆರ್ಸಿಬಿ ಐಪಿಎಲ್ನ ಭಾಗವಾಗಿದೆ. ಹಾಗಾಗಿ 2008 ರ ಜನವರಿ 24ರಂದು ಆರ್ಸಿಬಿ ಜನ್ಮತಾಳಿತು.
ಕಳೆದ 13 ಆವೃತ್ತಿಗಳಲ್ಲಿ ಆರ್ಸಿಬಿ ಐಪಿಎಲ್ನಲ್ಲಿ ಪಾಲ್ಗೊಂಡಿದೆ. 3 ಬಾರಿ ಐಪಿಎಲ್ ಫೈನಲ್ ಹಂತಕ್ಕೇರುವಲ್ಲಿ ಸಫಲವಾಗಿತ್ತು. 2009, 2011 ಹಾಗೂ 2016ರಲ್ಲಿ ಫೈನಲ್ ಹಂತಕ್ಕೇರಿತ್ತು ಆರ್ಸಿಬಿಯನ್ನು ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರಂಥ ದಿಗ್ಗಜ ಆಟಗಾರರು ಮುನ್ನಡೆಸಿದ್ದಾರೆ. ಆರ್ಸಿಬಿ ತಂಡವನ್ನು 2011ರ ಆವೃತ್ತಿಯಿಂದ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ.