RCB vs PBKS: ಇಂದು ಆರ್‌ಸಿಬಿ-ಪಂಜಾಬ್ ಮರುಮುಖಾಮುಖಿ; ಆರ್ಸಿಬಿಗೆ ಸೇಡಿನ ಪಂದ್ಯ
IPL 2025: ತವರಿನ ಮುಲ್ಲನ್ಪುರದಲ್ಲಿ ಪಂಜಾಬ್ ತಾನೆಷ್ಟು ಬಲಿಷ್ಠ ಎನ್ನುವುದನ್ನು ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತೋರಿಸಿಕೊಟ್ಟಿತ್ತು. ಕೇವಲ 111 ರನ್ ಬಾರಿಸಿದರೂ ಘಾತಕ ಬೌಲಿಂಗ್ ದಾಳಿಯ ಮೂಲಕ ಪಂದ್ಯವನ್ನು ರಕ್ಷಿಸಿಕೊಂಡು ದಾಖಲೆಯ ಗೆಲುವು ಸಾಧಿಸಿತ್ತು. ಹೀಗಾಗಿ ಆರ್‌ಸಿಬಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕು.


ಮುಲ್ಲನ್ಪುರ: ಶಕ್ರವಾರವಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವನ್ನಾಡಿದ್ದ ಆರ್‌ಸಿಬಿ(RCB) 40 ಗಂಟೆಗೂ ಕಡಿಮೆ ಅಂತರದಲ್ಲಿ ಮತ್ತೆ ಪಂಜಾಬ್ ಕಿಂಗ್ಸ್(RCB vs PBKS) ವಿರುದ್ಧ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಭಾನುವಾರ) ಮುಲ್ಲನ್ಪುರದಲ್ಲಿ ನಡೆಯುವ ಮಧ್ಯಾಹ್ನದ ಐಪಿಎಲ್(IPL 2025) ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ತವರಿನಾಚೆ ಸತತ 4 ಜಯದೊಂದಿಗೆ ಅಜೇಯವಾಗಿರುವ ಆರ್‌ಸಿಬಿ ಇಂದಿನ ಪಂದ್ಯದಲ್ಲಿಯೂ ಗೆಲುವಿನ ಹಂಬಲದಲ್ಲಿದೆ. ಜತೆಗೆ ತವರಿನಲ್ಲಿ ಅನುಭವಿಸಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವುದು ರಜತ್ ಪಾಟೀದಾರ್ ಬಳಗದ ಪ್ರಮುಖ ಗುರಿಯಾಗಿದೆ.
ಕಳೆದ ಪಂದ್ಯದಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮ ಸಹಿತ ಪ್ರಮುಖ ಬ್ಯಾಟರ್ಗಳೆಲ್ಲ ಕೈಕೊಟ್ಟಿದ್ದರು. ಇವರೆಲ್ಲ ಈ ಪಂದ್ಯದಲ್ಲಿ ಮತ್ತೆ ಲಯ ಕಂಡುಕೊಳ್ಳುವ ಅಗತ್ಯವಿದೆ. ಬೌಲಿಂಗ್ನಲ್ಲಿ ಅನುಭವಿ ವೇಗಿಗಳಾದ ಜೋಶ್ ಹ್ಯಾಸಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು ಸ್ಪಿನ್ನರ್‌ಗಳಿಂದ ಅಷ್ಟು ಪರಿಣಾಮಕಾರಿ ಪ್ರದರ್ಶನ ಕಂಡುಬರುತ್ತಿಲ್ಲ. ಇದು ಕೂಡ ತಂಡ ಹಿನ್ನಡೆಗೆ ಕಾರಣ.
ಆರ್‌ಸಿಬಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಪ್ಲೇಆಫ್ ಹಂತಕ್ಕೇರಲು ಆರ್ಸಿಬಿಗೆ ಉಳಿದ 7 ಪಂದ್ಯಗಳಲ್ಲಿ ಮತ್ತೆ 4 ಗೆಲುವಿನ ಅಗತ್ಯವಿದೆ. ಹೀಗಾಗಿ ಇಂದಿನ ಪಂದ್ಯದಿಂದಲೇ ಗೆಲುವಿನ ಬೇಟೆ ಮುಂದುವರಿಸಬೇಕು.
𝙉𝙤𝙩𝙝𝙞𝙣𝙜, just some pictures in our camera roll. 😬#withnothing #withnothing3apro pic.twitter.com/VBZSOpQlIA
— Royal Challengers Bengaluru (@RCBTweets) April 19, 2025
ತವರಿನ ಮುಲ್ಲನ್ಪುರದಲ್ಲಿ ಪಂಜಾಬ್ ತಾನೆಷ್ಟು ಬಲಿಷ್ಠ ಎನ್ನುವುದನ್ನು ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತೋರಿಸಿಕೊಟ್ಟಿತ್ತು. ಕೇವಲ 111 ರನ್ ಬಾರಿಸಿದರೂ ಘಾತಕ ಬೌಲಿಂಗ್ ದಾಳಿಯ ಮೂಲಕ ಪಂದ್ಯವನ್ನು ರಕ್ಷಿಸಿಕೊಂಡು ದಾಖಲೆಯ ಗೆಲುವು ಸಾಧಿಸಿತ್ತು. ಹೀಗಾಗಿ ಆರ್‌ಸಿಬಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕು. ಹೀಳಿ ಕೇಳಿ ಇದು ಬೌಲಿಂಗ್ ಟ್ರ್ಯಾಕ್. ಅದರಲ್ಲೂ ಸ್ಪಿನ್ನರ್‌ಗಳು ಹೆಚ್ಚು ಹಿಡಿತ ಸಾಧಿಸುತ್ತಾರೆ.
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಯಶ್ ದಯಾಲ್.
ಇದನ್ನೂ ಓದಿ IPL 2025: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಐಪಿಎಲ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ನಾಯರ್
ಆರ್‌ಸಿಬಿ: ಪ್ರಿಯಾಂಶ್ ಆರ್ಯ, ನೆಹಾಲ್ ವಧೇರಾ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಜೋಶ್ ಇಂಗ್ಲಿಸ್ (ವಿ.ಕೀ.), ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.