ಮುಂಬೈ: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಜೋಶ್ ಹೇಜಲ್ ವುಡ್ ಅವರ ಮಾರಕ ಬೌಲಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಲು ನೆರವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಆರ್ ಸಿಬಿ ಪರ ವಿರಾಟ್ ಕೊಹ್ಲಿ ಮೊದಲ ಬಾಲ್ ನಲ್ಲಿಯೇ ಡಕ್ ಔಟ್ ಆಗುವುದರೊಂದಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಆರಂಭದಲ್ಲಿಯೇ ಸಂಕಷ್ಟದಲ್ಲಿದ್ದ ಆರ್ ಸಿಬಿಗೆ ನಾಯಕ ಫಾಫ್ ಡು ಪ್ಲೆಸಿಸ್ 11 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 96 ರನ್ ಸಿಡಿಸುವುದರೊಂದಿಗೆ ತಂಡ ಪಂದ್ಯ ಗೆಲ್ಲುವಲ್ಲಿ ಉತ್ತಮ ಕೊಡುಗೆ ನೀಡಿದರು.
ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ 24 ರನ್ ಗಳಿಸಿ ಔಟಾದರು. ನಂತರ ಸುಯಶ್ ಎಸ್ ಪ್ರಭುದೇಸಾಯಿ 10 ರನ್, ಶಹಬಾಜ್ ಅಹಮದ್ 26 ರನ್ ಗಳಿಸಿ ರನೌಟ್ ಆದರು. ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ 8 ಎಸೆತದಲ್ಲಿ 13 ರನ್ ಗಳಿಸಿ ತಂಡ ಉತ್ತಮ ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಲಖನೌ ಪರ ಚಮೀರ 2, ಜೇಸನ್ ಹೋಲ್ಡರ್ 2 ಹಾಗೂ ಕೃಣಾಲ್ ಪಾಂಡ್ಯ 1 ವಿಕೆಟ್ ಪಡೆದರು.
182 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ 42, ಕೆ.ಎಲ್. ರಾಹುಲ್ 30, ಮಾರ್ಕಸ್ ಸ್ಟೊಯಿನಿಸ್ 24 ರನ್ ಗಳಿಸಿದರು. ಆರ್ ಸಿಬಿ ಪರ ಜೋಶ್ ಹೇಜಲ್ ವುಡ್ 4 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 2, ಗ್ಲೆನ್ ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದರು. 94 ರನ್ ಗಳಿಸಿದ ನಾಯಕ ಫಾಫ್ ಡು ಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುರಿ ಬೆನ್ನಟ್ಟಲು ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಒಂದೆಡೆ ವಿಕೆಟ್‌ಗಳು ಉರುಳುತ್ತಾ ಸಾಗಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಫಫ್ ಡುಪ್ಲೆಸಿ ಕೇವಲ 63 ಎಸೆತಗಳಲ್ಲಿ 96 ರನ್ ಗಳಿಸಿ ಕೇವಲ 4 ರನ್ ಅಂತರದಿಂದ ಶತಕ ವಂಚಿತರಾದರು.ಕೊನೆಯ ಹಂತದಲ್ಲಿ ಎಂದಿನಂತೆಯೇ ಚುರುಕಿನಿಂದ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 13 ರನ್ ಗಳಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕಾರಣರಾದರು.
ಲಖನೌ ಪರ ಚಮೀರ 2, ಜೇಸನ್ ಹೋಲ್ಡರ್ 2, ಕೃಣಾಲ್ ಪಾಂಡ್ಯ 1 ವಿಕೆಟ್ ಪಡೆದರು.
ಇದರಿಂದ ಲೀಗ್‌ನಲ್ಲಿ ಸತತ ೫ನೇ ಗೆಲುವು ದಾಖಲಿಸಿದ ಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಆರ್‌ಸಿಬಿ: 6 ವಿಕೆಟ್‌ಗೆ 181 (ಪ್ಲೆಸಿಸ್ 96, ಗ್ಲೆನ್ ಮ್ಯಾಕ್ಸ್‌ವೆ 23, ಶಾಬಾಜ್ ಅಹಮದ್ 26, ದುಶ್ಮಂತ ಚಮೀರಾ 31ಕ್ಕೆ 2, ಜೇಸನ್ ಹೋಲ್ಡರ್ 25ಕ್ಕೆ 2, ಕೃನಾಲ್ ಪಾಂಡ್ಯ 29ಕ್ಕೆ 1), ಲಖನೌ ಸೂಪರ್‌ಜೈಂಟ್ಸ್: 6 ವಿಕೆಟ್‌ಗೆ 163 (ಕೆಎಲ್ ರಾಹುಲ್ 30, ಕೃನಾಲ್ ಪಾಂಡ್ಯ 42, ಮಾರ್ಕಸ್ ಸ್ಟೋಯಿನಿಸ್ 24, ಜೋಶ್ ಹ್ಯಾಸಲ್‌ವುಡ್ 25ಕ್ಕೆ 4, ಹರ್ಷಲ್ ಪಟೇಲ್ 47ಕ್ಕೆ 2)