ಶಾರ್ಜಾ: ಮುಂದಿನ ಹಂತ ತಲುಪಲು ಸಣ್ಣ ಅವಕಾಶ ಹೊಂದಿರುವ ಕೆ.ಎಲ್.ರಾಹುಲ್ ನಾಯಕತ್ವದ ಪಂಬಾಬ್ ಕಿಂಗ್ಸ್ ಭಾನುವಾರದ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಪಂಜಾಬ್ ತಂಡ ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿಕೊಂಡಿದೆ. ಫ್ಯಾಬಿಯನ್ ಅಲೆನ್ ಬದಲಿಗೆ ಹರ್ಪ್ರೀತ್ ಬ್ರರ್, ದೀಪಕ್ ಹೂಡಾ ಬದಲಿಗೆ ಮಂದೀಪ್ ಸಿಂಗ್ ಮತ್ತು ನಥನ್ ಎಲಿಸ್ ಬದಲಿಗೆ ಮೋಸಿಸ್ ಹೆನ್ರಿಕ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದಿನ ಪಂದ್ಯ ಗೆದ್ದರೆ ಪಂಜಾಬ್ ಕಿಂಗ್ಸ್ ಗೆ ಮುಂದಿನ ಹಂತಕ್ಕೇರುವ ಕನಸು ಜೀವಂತ ವಾಗಿರಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಗೆದ್ದರೆ ಪ್ಲೇ ಆಫ್ ಗೆ ಎಂಟ್ರಿ ಕೊಡಲಿದೆ.
ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಪಂಜಾಬ್ ತಂಡವು ಆರ್‌ಸಿಬಿ ವಿರುದ್ಧ 34 ರನ್‌ಗಳ ಗೆಲುವು ಸಾಧಿಸಿತ್ತು.
ತಂಡಗಳು:
ಬೆಂಗಳೂರು: ವಿರಾಟ್ ಕೊಹ್ಲಿ (ನಾ), ದೇವದತ್ ಪಡಿಕ್ಕಲ್, ಕೆಎಸ್ ಭರತ್ (ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಡ್ಯಾನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್
ಪಂಜಾಬ್: ಕೆಎಲ್ ರಾಹುಲ್ (ನಾ & ವಿ.ಕೀ), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಏಡೆನ್ ಮಾರ್ಕ್ರಮ್, ಶಾರುಖ್ ಖಾನ್, ಮಂದೀಪ್ ಸಿಂಗ್, ಹರ್ ಪ್ರೀತ್ ಬ್ರಾರ್, ಮೋಸಿಸ್ ಹೆನ್ರಿಕ್ಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್