Saturday, 7th September 2024

ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ನೇಮಕ

ಬೆಂಗಳೂರು: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ನೇಮಕಗೊಂಡಿದ್ದಾರೆ.

2023ರ ಐಪಿಎಲ್ ವರೆಗೆ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರಿಂದ ಫ್ಲವರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಫ್ಲವರ್ ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್‌ನ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದರು. ಐಪಿಎಲ್ 2022 ಮತ್ತು 2023 ರಲ್ಲಿ ಲಕ್ನೋ ತಂಡ ಪ್ಲೇಆಫ್‌ ಪ್ರವೇಶಿಸುವಲ್ಲಿ ಯಶಸ್ಸು ಸಾಧಿಸಿತ್ತು. ಇತ್ತಿಚೆಗೆ ಲಕ್ನೋ ತಂಡ ಫ್ಲವರ್​ ಅವರನ್ನು ಕೈಬಿಟ್ಟು ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ನೇಮಿಸಿಕೊಂಡಿದೆ.

ಫ್ಲವರ್ ಅವರು 2009 ಮತ್ತು 2013 ರಲ್ಲಿ ಆಯಶಸ್ ಸರಣಿಯ ಗೆಲುವಿಗೆ ಇಂಗ್ಲೆಂಡ್​ ತಂಡಕ್ಕೆ ಮಾರ್ಗ ದರ್ಶನ ನೀಡಿದ್ದರು. ಅಲ್ಲದೇ 2010-11 ರಲ್ಲಿ ಆಸ್ಟ್ರೇಲಿ ಯಾದ ಕೋಚ್​ ಆಗಿಯೂ ಕಾರ್ಯ ನಿರ್ವಹಿಸಿದ್ದರು. 2010 ರಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ಪ್ರಶಸ್ತಿ ಗೆಲ್ಲುವ ಸಂದರ್ಭದಲ್ಲಿ ಮುಖ್ಯ ಕೋಚ್ ಆಗಿದ್ದರು.

2014ರಲ್ಲಿ ಇಂಗ್ಲೆಂಡ್​ನ ಕೋಚ್​ ಹುದ್ದೆಯಿಂದ ಕೆಳಗಿಳಿದ ನಂತರ ಆಂಡಿ ಫ್ಲವರ್​ ಐದು ವರ್ಷಗಳ ಕಾಲ ಇಂಗ್ಲೆಂಡ್‌ನ ಪಾಥ್‌ವೇ ಸಿಸ್ಟಮ್‌ಗಳಲ್ಲಿ ಕೆಲಸ ಮಾಡಿದರು. ನಂತರ ಐಪಿಎಲ್​ನ ಪಂಜಾಬ್ ​ಕಿಂಗ್ಸ್ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ನಲ್ಲಿ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!