Sunday, 15th December 2024

ಅಂಕಪಟ್ಟಿಯಲ್ಲಿ ಮೇಲೇಳಲು ಆರ್​ಸಿಬಿ ಮುಂದಿನ ಪಂದ್ಯ ಗೆಲ್ಲಲೇಬೇಕು…!

ಬೆಂಗಳೂರು: ಐಪಿಎಲ್ 2024 ರಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ ಮೇಲೇಳಲು ಮುಂದಿನ ಮ್ಯಾಚ್ ಗೆಲ್ಲಲೇ ಬೇಕಿದೆ.

ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ವಾಗಿ ಸೋತಿತು. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್​ಗಳಿಂದ ಗೆದ್ದು ಬೀಗಿತು.  ಪಾಯಿಂಟ್ಸ್ ಟೇಬಲ್​ನಲ್ಲಿ ಆರ್​ಸಿಬಿ ಆರನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯದಲ್ಲಿ 2 ಅಂಕ ಪಡೆದು ಕೊಂಡಿದೆ. ಅಂಕಪಟ್ಟಿಯಲ್ಲಿ ಮೇಲೇಳಲು ಬೆಂಗಳೂರು ಮುಂದಿನ ಮ್ಯಾಚ್ ಗೆಲ್ಲಲೇ ಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ.  ಬೆಂಗಳೂರು ಮತ್ತು ಲಕ್ನೋ ನಡುವಿನ 2024 ರ ಐಪಿಎಲ್ ಪಂದ್ಯ ಏಪ್ರಿಲ್ 2ರಂದು ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು-ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯ್ಯಾಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ. ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆಷ್ಟನ್ ಟರ್ನರ್, ಡೇವಿಡ್ ವಿಲಿ, ಮೊಹಮ್ಮದ್ ಅರ್ಷದ್ ಖಾನ್.