Thursday, 19th September 2024

Rishabh Pant : ದುಲೀಪ್ ಟ್ರೋಫಿ ಪಂದ್ಯದ ವೇಳೆ ಎದುರಾಳಿ ತಂಡಕ್ಕೆ ಮೋಸ ಮಾಡಿದ ರಿಷಭ್‌ ಪಂತ್‌!

Rishabh Pant

ಬೆಂಗಳೂರು: ದುಲೀಪ್ ಟ್ರೋಫಿ 2024 ರಲ್ಲಿ ಭಾರತ ಎ ಮತ್ತು ಭಾರತ ಬಿ ನಡುವೆ ನಡೆಯುತ್ತಿರುವ ಪಂದ್ಯದ ವೇಳೆ ಬಿ ತಂಡದ ಪರವಾಗಿ ಆಡುತ್ತಿರುವ ರಿಷಭ್ ಪಂತ್ (Rishabh Pant) ಎದುರಾಳಿ ತಂಡಕ್ಕೆ ಮೋಸ ಮಾಡಿದ್ದಾರೆ. ಈ ದೃಶ್ಯ ಪಂದ್ಯದ ನೇರ ಪ್ರಸಾರ ಕ್ಯಾಮೆರಾಗಳಲ್ಲಿ ಸೆರ ಸಿಕ್ಕಿವೆ. ದುಲೀಪ್ ಟ್ರೋಫಿ 2024 ಪ್ರಾರಂಭವಾದಾಗಿನಿಂದ ರಿಷಭ್ ಪಂತ್ ಸಂತೋಷದ ಮನಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿ ಮೂಲಕ 2022 ರ ನಂತರ ಅವರು ರೆಡ್-ಬಾಲ್ ಕ್ರಿಕೆಟ್‌ಗೆ ಮರಳಿದಂತಾಗಿದೆ. ಬಾಂಗ್ಲಾದೇಶ ಟೆಸ್ಟ್ ನಂತರ 2022 ರ ಡಿಸೆಂಬರ್‌ನಲ್ಲಿ ಎದುರಿಸಿದ ಭೀಕರ ಅಪಘಾತದ ನಂತರ ಕೀಪರ್-ಬ್ಯಾಟರ್‌ ತಮ್ಮ ಮೊದಲ ದೀರ್ಘ ಅವಧಿಯ ಕ್ರಿಕೆಟ್ ಆಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ 2024 ರಲ್ಲಿ ಪಂತ್ ಟೆಸ್ಟ್ ಅಗತ್ಯವಾಗಿ ಮರಳಿದ್ದಾರೆ. ಕೀಪರ್-ಬ್ಯಾಟರ್‌f ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ತಂಡಕ್ಕಾಗಿ ಬ್ಯಾಟ್‌ನಲ್ಲಿ ಮಿಂಚಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲಿಯೂ ಕಳೆ ಕಂಡುಕೊಂಡಿದ್ದಾರೆ. ವಿಕೆಟ್‌ ಎರಡೂ ಬದಿಗಳಲ್ಲಿ ಡೈವಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರಿಷಭ್ ಪಂತ್ ಕೂಡ ಮೈದಾನದಲ್ಲಿ ತಮ್ಮ ತುಂಟಾಟಗಳಿಂದ ಎಲ್ಲರನ್ನೂ ರಂಜಿಸುತ್ತಿದ್ದಾರೆ. ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದ 4 ನೇ ದಿನದಂದು, ಕೀಪರ್- ಬ್ಯಾಟರ್‌ ಅಂಥದ್ದೊಂದು ಕೆಲಸವನ್ನು ಮಾಡುವ ಮೂಲಕ ಮಿಂಚಿದ್ದಾರೆ.

ದಿನದಾಟದ ಆರಂಭಕ್ಕೂ ಎ ತಂಡ ಆಟದ ಯೋಜನೆಗಳನ್ನು ರೂಪಿಸುತ್ತಿತ್ತು. ಈ ವೇಳೆ ಎದುರಾಳಿ ತಂಡ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಪಂತ್‌ ಭಾರತ ‘ಎ’ ತಂಡದೊಳಗೆ ಮೆಲ್ಲಗೆ ನುಸುಳಿದ್ದರು. ಎಲ್ಲವನ್ನೂ ತಿಳಿದುಕಂಡ ಬಳಿಕ ಅವರು ಅವೇಶ್ ಖಾನ್ ಅವರೊಂದಿಗೆ ನಗುತ್ತಿರುವುದು ಕಂಡಿತು.

ಭಾರತ ಎ ಗುಂಪಿಗೆ ಸೇರಿದ ಪಂತ್‌

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ರಿಷಭ್ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾವ ಬೀರಿದರು. ತಂಡ ಆರಂಭಿಕ ವಿಕೆಟ್‌ ಕಳೆದುಕೊಂಡು ಒತ್ತಡದಲ್ಲಿದ್ದಾಗ ಕೀಪರ್- ಬ್ಯಾಟರ್‌ ಬ್ಯಾಟಿಂಗ್‌ಗೆ ಬಂದರು. ಅವರು ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು.

ಪಂತ್ ಅಬ್ಬರದ ಅರ್ಧಶತಕ ಬಾರಿಸಿದರು ಮತ್ತು ಟೆಸ್ಟ್ ಕ್ರಿಕೆಟ್‌ಗೆ ತಮ್ಮ ಆಗಮನವನ್ನು ಘೋಷಿಸಿಕೊಂಡರು. ಎಡಗೈ ಬ್ಯಾಟ್ಸ್ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ ಅದ್ಭುತ ಶಾಟ್‌ಗಳನ್ನು ಆಡಿದರು. 47 ಎಸೆತಗಳಲ್ಲಿ 61 ರನ್‌ ಬಾರಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇದು ತಂಡಕ್ಕೆ ಭಾರಿ ಮುನ್ನಡೆ ಸಾಧಿಸಲು ಸಹಾಯ ಮಾಡಿತು.

ಇದನ್ನೂ ಓದಿ: Rahul Dravid : ಭಾರತದ ಕ್ರಿಕೆಟ್‌ ಪವರ್ ಆಗುವುದಕ್ಕೆ ಕಾರಣ ಏನೆಂದು ವಿವರಿಸಿದ ರಾಹುಲ್ ದ್ರಾವಿಡ್‌

ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ಮುಂಚಿತವಾಗಿ ಈ ಇನ್ನಿಂಗ್ಸ್ ಅವರಿಗೆ ಭಾರಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಭಾಗವಾಗಿರುವ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

634 ದಿನಗಳ ನಂತರ ಟೆಸ್ಟ್ ತಂಡಕ್ಕೆ ಮರಳಲಿರುವ ರಿಷಭ್ ಪಂತ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಒಟ್ಟಾರೆಯಾಗಿ, ಪಂತ್ 43.67 ಸರಾಸರಿಯಲ್ಲಿ 2,271 ರನ್ ಗಳಿಸಿದ್ದಾರೆ. ಇದರಲ್ಲಿ ಭಾರತಕ್ಕಾಗಿ 33 ಪಂದ್ಯಗಳಲ್ಲಿ ಐದು ಶತಕಗಳು ಸೇರಿವೆ. ಅವರು ಇತ್ತೀಚೆಗೆ ಟಿ 20 ವಿಶ್ವಕಪ್ 2024 ಸೇರಿದಂತೆ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.