ಬೆಂಗಳೂರು: ಐಪಿಎಲ್ 2025 ಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಉಳಿಸಿಕೊಳ್ಳುವ ಪಟ್ಟಿಯನ್ನು ಅಂತಿಮಗೊಳಿಸಲು ಕೇವಲ ಒಂದು ವಾರ ಉಳಿದಿದೆ. ಏತನ್ಮಧ್ಯೆ, ಮುಂಬರುವ ಋತುವಿನಲ್ಲಿ ಹೊಸ ನಾಯಕರನ್ನು ನೇಮಕ ಮಾಡುವುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಿರ್ಧರಿಸಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ರಿಷಭ್ ಪಂತ್ (Rishabh Pant) ಡೆಲ್ಲಿ ತಂಡದಲ್ಲಿ ಇರುವುದಿಲ್ಲ. ಹೀಗಾಗಿ ಅವರು ಹರಾಜಿಗೆ ಬರಲಿದ್ದು ಹಲವು ಫ್ರಾಂಚೈಸಿಗಳು ಅವರಿಗಾಗಿ ಬಲೆ ಬೀಸಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಿಷಭ್ ಪಂತ್ ಲಭ್ಯವಿರುವುದರಿಂದ ಐಪಿಎಲ್ 2025ಕ್ಕೆ ಅವರನ್ನು ನಾಯಕರನ್ನಾಗಿ ಮಾಡಲು ಹೆಜ್ಜೆ ಇಟ್ಟಿದೆ. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ಕೆಎಲ್ ರಾಹುಲ್ ಕೂಡ ಮುಂಬರುವ ಐಪಿಎಲ್ 2025 ರ ಮೆಗಾ ಹರಾಜಿಗೆ ಬರುವ ನಿರೀಕ್ಷೆಯಿದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ ) ತಂಡದ ನಿರ್ವಹಣೆಗೆ ತಮ್ಮ ತಂಡವನ್ನು ಬಲಪಡಿಸಲು ಆಯ್ಕೆಗಳನ್ನು ನೀಡುತ್ತದೆ.
ಆಟಗಾರರನ್ನು ಉಳಿಸಿಕೊಳ್ಳುವ ಗಡುವಿಗೆ ಕ್ಷಣಗಣನೆ ಸಮೀಪಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಪಂತ್ ಕಡೆಗೆ ನೆಟ್ಟಿದೆ. ಏಕೆಂದರೆ ಆರ್ಸಿಬಿ ಭಾರತೀಯ ತಾರೆಯೊಂದಿಗೆ ಸಹಿ ಮಾಡುವ ಗುರಿ ಹೊಂದಿದೆ ಎಂದು ವರದಿಯಾಗಿದೆ, ಅವರನ್ನು ನಾಯಕ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಒಮ್ಮತವಿಲ್ಲ
ನಾಯಕತ್ವದ ಚರ್ಚೆಯಲ್ಲಿ ರಿಷಭ್ ಪಂತ್ ಮತ್ತು ಡಿಸಿ ಮಾಲೀಕರು ಒಂದೇ ರೀತಿಯ ಯೋಚನೆಯಲ್ಲಿ ಇಲ್ಲ ಎಂದು ವರದಿಯಾಗಿದೆ. ಪ್ರತಿಭಾನ್ವಿತ ವಿಕೆಟ್ ಕೀಪರ್-ಬ್ಯಾಟರ್ ಐಪಿಎಲ್ನಲ್ಲಿ ಡಿಸಿಯನ್ನು ಮುನ್ನಡೆಸಲು ಉತ್ಸುಕರಾಗಿದ್ದರೂ ಪ್ರಸ್ತುತ ಡಿಸಿ ತಂಡದ ಆಡಳಿತವು ಪಂತ್ ಅವರನ್ನು ನಾಯಕನಾಗಿ ಮುಂದುವರಿಸಲು ಸಿದ್ಧವಿಲ್ಲ.
ಈ ಭಿನ್ನಾಭಿಪ್ರಾಯಗಳು ಪಂತ್ ಡಿಸಿಯಿಂದ ನಿರ್ಗಮಿಸಲು ಕಾರಣವಾಗಬಹುದು. ಇದು ಅವರ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಗುರುತಿಸಬಹುದು. ಏಕೆಂದರೆ ಅವರು 2016 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದಾಗಿನಿಂದ ಅವರು ದೆಹಲಿ ಮೂಲದ ಫ್ರಾಂಚೈಸಿಯ ಭಾಗವಾಗಿದ್ದಾರೆ. ಪಂತ್ ಅವರ ಬೇಡಿಕೆಯನ್ನು ಡಿಸಿ ಒಪ್ಪಿಕೊಳ್ಳದಿದ್ದರೆ, ಅವರು ಮುಂಬರುವ ಐಪಿಎಲ್ 2025 ಮೆಗಾ ಹರಾಜಿಗೆ ಪ್ರವೇಶಿಸಲಿದ್ದಾರೆ
ಆರ್ಸಿಬಿಗೆ ರಿಷಭ್ ಪಂತ್ ಸೂಕ್ತ
ದಿನೇಶ್ ಕಾರ್ತಿಕ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವುದರೊಂದಿಗೆ, ಆರ್ಸಿಬಿಗೆ ತಕ್ಷಣವೇ ವಿಕೆಟ್ ಕೀಪರ್-ಕಮ್-ಫಿನಿಶರ್ ಅಗತ್ಯವಿದೆ. ಪಂತ್ ಅವರ ನಾಯಕತ್ವದ ಕೌಶಲ್ಯಗಳ ಹೊರತಾಗಿ ಆ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಇದು ಆರ್ಸಿಬಿಗೆ ಬೋನಸ್ ಆಗಲಿದೆ. ಇದಲ್ಲದೆ ಕೆಎಲ್ ರಾಹುಲ್ ಕೂಡ ಹರಾಜು ಪಟ್ಟಿಯಲ್ಲಿ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: IND vs NZ 2nd Test: ಗಿಲ್ ಫಿಟ್, ರಾಹುಲ್ಗೆ ಕೊಕ್!
ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಕೋಚ್ ಆಗಿದ್ದು ಹರಾಜಿಗೆ ಮುಂಚಿತವಾಗಿ ಪಂತ್ ಡೆಲ್ಲಿಯಿಂದ ಹೊರ ಬಂದರೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಪಂತ್ ಮತ್ತು ಪಾಂಟಿಂಗ್ ಉತ್ತಮ ಸಂಬಂಧ ಹೊಂದಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಮುಂಬೈ ಇಂಡಿಯನ್ಸ್ (ಎಂಐ) ಕನಿಷ್ಠ 4-5 ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಏಕೈಕ ತಂಡವಾಗಲಿದೆ.