Friday, 22nd November 2024

‌Rishabh Pant: ಪಂತ್‌ಗೆ ‘ಐ ಲವ್‌ ಯೂ’ ಎಂದ ಅಭಿಮಾನಿ; ವಿಡಿಯೊ ವೈರಲ್

ಬೆಂಗಳೂರು: ಗಾಯದ ಮಧ್ಯೆಯೂ ದಿಟ್ಟ ಬ್ಯಾಟಿಂಗ್‌ ಹೋರಾಟ ನಡೆಸಿದ ರಿಷಭ್‌ ಪಂತ್‌(Rishabh Pant) ಪರಾಕ್ರಮಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದರು. ಪಂತ್‌ ಮೈದಾನದಿಂದ ಪೆವಿಲಿಯನ್‌ ಕಡೆಗೆ ಬರುತ್ತಿದ್ದ ವೇಳೆ ಅಭಿಮಾನಿಯೊಬ್ಬ ಪಂತ್‌ಗೆ ಐ ಲವ್‌ ಯೂ…ಎಂದು ಹೇಳಿದ್ದಾನೆ. ಈ ವೇಳೆ ಪಂತ್‌ ‘ಥಮ್ಸ್ ಅಪ್’ ಮಾಡಿ ಪ್ರತಿಕ್ರಿಯೆ ನೀಡಿ ಬಳಿಕ ಅಭಿಮಾಗಳ ಜತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಪಂತ್‌ಗೆ ಅಭಿಮಾನಿ ಐ ಲವ್‌ ಯೂ ಎಂದ ವಿಡಿಯೊ ವೈರಲ್‌ ಆಗಿದೆ.

ದ್ವಿತೀಯ ದಿನದಾಟದಲ್ಲಿ ಮೊಣಕಾಲಿಗೆ ಚೆಂಡು ಬಡಿದು ಮೈದಾನ ತೊರೆದಿದ್ದ ಪಂತ್‌ ಮೂರನೇ ನಾಲ್ಕನೇ ದಿನದಾದಲ್ಲಿ ಬ್ಯಾಟಿಂಗ್‌ ನಡೆಸಿದರು. ಗಾಯದಿಂದ ಹೆಚ್ಚು ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದ್ದ ಪಂತ್‌ ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ್ದರು. ಇದರಲ್ಲಿ ಒಂದು ಸಿಕ್ಸರ್‌ 107 ಮೀ. ದೂರ ಸಾಗಿತ್ತು. ಪಂತ್‌ ಬಾರಿಸಿದ ಈ ಸಿಕ್ಸರ್‌ ಕಂಡು ಕಿವೀಸ್‌ ಆಟಗಾರರ ಮತ್ತು ಪ್ರೇಕ್ಷಕರು ಒಂದು ಕ್ಷಣ ದಂಗಾಗಿದ್ದರು. ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ 99 ರನ್‌ಗೆ ಬೌಲ್ಡ್‌ ಆಗಿ ಶತಕ ವಂಚಿತರಾದರು.

ಇದನ್ನೂ ಓದಿ WTC 2025 Points Table: ಭಾರತದ ಗೆಲುವಿನ ಶೇಕಡಾವಾರು ಅಂಕದಲ್ಲಿ ಭಾರೀ ಕುಸಿತ

ಅಮೋಘ ಆಟವಾಡಿದ ಪಂತ್ 105 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಅಮೋಘ ಸಿಕ್ಸರ್ ಸಿಡಿಸಿದರು. ಇದು ಪಂತ್‌ ಅವರ 7ನೇ ನರ್ವಸ್‌ ನೈಂಟಿ. ಟೆಸ್ಟ್‌ನಲ್ಲಿ 90 ರನ್ ದಾಟಿದ ಬಳಿಕ ಅತಿ ಹೆಚ್ಚು ಔಟಾದ ಭಾರತದ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್(10ಬಾರಿ) ಮೊದಲಿಗರಾಗಿದ್ದಾರೆ. ರಾಹುಲ್ ದ್ರಾವಿಡ್ 9 ಬಾರಿ, ಸುನಿಲ್ ಗವಾಸ್ಕರ್ 5 ಬಾರಿ, ಎಂಎಸ್ ಧೋನಿ 5 ಬಾರಿ,ವೀರೇಂದ್ರ ಸೆಹ್ವಾಗ್ 5 ಬಾರಿ ಔಟಾಗಿ ನಿರಾಶರಾಗಿದ್ದರು.

ನ್ಯೂಜಿಲ್ಯಾಂಡ್‌(India vs New Zealand 1st Test) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲು ಕಂಡ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25 ಅಂಕಪಟ್ಟಿಯಲ್ಲಿ(WTC 2025 Points Table) ಭಾರತದ ಗೆಲುವಿನ ಶೇಕಡಾವಾರು ಅಂಕದಲ್ಲಿ ಕುಸಿತ ಕಂಡಿದೆ. ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್‌ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದೆ.  8 ವಿಕೆಟ್‌ ಗೆಲುವು ಸಾಧಿಸಿದ ನ್ಯೂಜಿಲೆಂಡ್‌ 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಐತಿಹಾಸಿಕ ಸಾಧನೆ ಮಾಡಿತು.