Sunday, 8th September 2024

ಟಿ-20 ಕ್ರಿಕೆಟ್: ಸಾವಿರ ರನ್‌ ಗಳಿಸಿದ ಪಾಕಿಸ್ತಾನದ ರಿಜ್ವಾನ್

ದುಬೈ: ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಬೃಹತ್ ಮೈಲುಗಲ್ಲು ಸಾಧಿಸಿ ದ್ದಾರೆ. ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ರಿಜ್ವಾನ್ ಪಾತ್ರರಾಗಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ 29 ವರ್ಷದ ರಿಜ್ವಾನ್ ಭಾರತದ ವಿರುದ್ಧ 79 ರನ್ ಹಾಗೂ ನಮೀಬಿಯಾ ವಿರುದ್ಧ ಕೂಡ 79 ರನ್ ಗಳಿಸಿದ್ದಾರೆ. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 1000 ರನ್ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ರಿಜ್ವಾನ್ ಅವರದ್ದಾಗಿದೆ.

ಇದಕ್ಕೂ ಮೊದಲು 2019 ರಲ್ಲಿ, ಟಿ-20 ಕ್ರಿಕೆಟ್ ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐರ್ಲೆಂಡ್ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅವರು, ಕೇವಲ 20 ಇನ್ನಿಂಗ್ಸ್‌ಗಳಲ್ಲಿ 41.55 ಸರಾಸರಿ ಮತ್ತು 140.60 ಸ್ಟ್ರೈಕ್ ರೇಟ್‌ನಲ್ಲಿ 748 ರನ್ ಗಳಿಸಿ ದ್ದರು.

ಪಾಕಿಸ್ತಾನದ ರಿಜ್ವಾನ್ 2021ರಲ್ಲಿ 23 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!