Thursday, 12th December 2024

ಟೀಂ ಇಂಡಿಯಾ ಸೇರಿಕೊಂಡ ರೋಹಿತ್‍

ಮೆಲ್ಬರ್ನ್‌: ಟೀಂ ಇಂಡಿಯಾದ ಅನುಭವಿ ರೋಹಿತ್‍ ಶರ್ಮಾ ಅವರು ಬುಧವಾರ ತಂಡವನ್ನು ಸೇರಿಕೊಂಡಿದ್ದಾರೆ.

ಚಿಕಿತ್ಸೆ ಬಳಿಕ, ಆಸ್ಟ್ರೇಲಿಯಾದಲ್ಲಿ ಅಲ್ಲಿನ ನಿಯಮದಂತೆ ಕ್ವಾರಂಟೈನ್‍ ಗೊಳಗಾಗಿದ್ದ ರೋಹಿತ್‍, ಬುಧವಾರ ತಂಡವನ್ನು ಸೇರಿಕೊಂಡಿದ್ದಾರೆ.  ಜನವರಿ 7ರಿಂದ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿರುವ ಟೀಂ ಇಂಡಿಯಾಕ್ಕೆ ರೋಹಿತ್‌ ಆಗಮನ, ತಂಡಕ್ಕೆ ಇನ್ನಷ್ಟು ಬಲ ನೀಡಿದಂತಾಗಿದೆ. ಅಂತೆಯೇ, ಆರಂಭಿಕರತಾಗಿ ಎರಡೂ ಟೆಸ್ಟ್‌ನಲ್ಲಿ ವೈಫಲ್ಯ ಕಂಡ ಮಯಾಂಕ್‌ ಅಗರ್ವಾಲ್‌ ಹಾಗೂ ಹನುಮ ವಿಹಾರಿ ಇವರಿಬ್ಬರಲ್ಲಿ ಯಾರು ರೋಹಿತ್‌ಗೆ ಜಾಗ ಬಿಟ್ಟುಕೊಡುವರೆಂದು ಕಾದು ನೋಡಬೇಕಿದೆ.

ಮೂರನೇ ಟೆಸ್ಟ್‌ ಲಭ್ಯತೆ ಕುರಿತಂತೆ, ಇನ್ನಷ್ಟೇ ಭಾರತದ ಕ್ರಿಕೆಟ್‌ ಆಡಳಿತ ಮಂಡಳಿ, ರೋಹಿತ್‌ ಜತೆ ಚರ್ಚೆ ನಡೆಸಬೇಕಿದೆ.