ಮುಂಬಯಿ: ಮುಂಬರುವ ಬಾಂಗ್ಲಾದೇಶ(Bangladesh tour of India) ವಿರುದ್ಧದ ತವರಿನ ಟೆಸ್ಟ್ ಸರಣಿಗೆ(India vs Bangladesh Test) ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅಭ್ಯಾಸ ಆರಂಭಿಸಿದ್ದಾರೆ. ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಮುಂಬೈಯ ಮೈದಾನವೊಂದರಲ್ಲಿ ರೋಹಿತ್ ರನ್ನಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ.
ರೋಹಿತ್ ಕೊನೆಯ ಬಾರಿ ಭಾರತ ಪರ ಟೆಸ್ಟ್ ಪಂದ್ಯವನ್ನಾಡಿದ್ದು 2024 ರ ಮಾರ್ಚ್‌ನಲ್ಲಿ. ಇಂಗ್ಲೆಂಡ್ ವಿರುದ್ಧ ಪಂದ್ಯ ಇದಾಗಿತ್ತು. ಆ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಮೂರನೇ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ನಲ್ಲಿ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ರೋಹಿತ್ ಬ್ಯಾಟಿಂಗ್ ಫಾರ್ಮ್ ದೊಡ್ಡ ಪಾತ್ರವನ್ನು ವಹಿಸಲಿದೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಭಾರತ ಪರ ಏಕದಿನ ಮತ್ತು ಟೆಸ್ಟ್ ಪಂದ್ಯ ಮಾತ್ರ ಆಡುತ್ತಿದ್ದಾರೆ. ರೋಹಿತ್ ಇದುವರೆಗೆ 59 ಟೆಸ್ಟ್ ಪಂದ್ಯ ಆಡಿ 4138 ರನ್ ಗಳಿಸಿದ್ದಾರೆ. 1 ದ್ವಿಶತಕ ಮತ್ತು 12 ಶತಕ, 17 ಅರ್ಧಶತಕ ಬಾರಿಸಿದ್ದಾರೆ. ಸದ್ಯ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2 ಬಾರಿ ಫೈನಲ್ ಪ್ರವೇಶಿಸಿದ್ದರೂ ಕೂಡ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು.
ಪೂರ್ವ ವೇಳಾಪಟ್ಟಿಯ ಪ್ರಕಾರ ಭಾರತ ಇನ್ನು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲ್ಯಾಂಡ್ ವಿರುದ್ಧ 3, ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ 10 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದ ಸಾಧನೆ ಮಾಡಲಿದೆ.
https://x.com/CricCrazyJohns/status/1829810073239179659
ಸದ್ಯ ಭಾರತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದುವರೆಗೆ ಆಡಿದ 9 ಪಂದ್ಯಗಲ್ಲಿ 6 ಜಯ, 2 ಸೋಲು, 1 ಡ್ರಾ ಸಾಧಿಸಿ 68.51 ಗೆಲುವಿನ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಜಯ ದಾಖಲಿಸಿ, 62.5 ಗೆಲುವಿನ ಸರಾಸರಿಯನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಉಳಿದ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೂ ಫೈನಲ್ ಪ್ರವೇಶಿಸಲಿದೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪ್ರವೇಶದ ತೀವ್ರ ಪೈಪೋಟಿ ಏರ್ಪಟ್ಟಿದೆ.
ಭಾರತದ ಟೆಸ್ಟ್ ಸರಣಿ ವೇಳಾಪಟ್ಟಿ
ಬಾಂಗ್ಲಾದೇಶ ವಿರುದ್ಧ
ಸೆಪ್ಟೆಂಬರ್-19 ಮೊದಲ ಟೆಸ್ಟ್ ಪಂದ್ಯ. ತಾಣ: ಚೆನ್ನೈ
ಸೆಪ್ಟೆಂಬರ್-27 ದ್ವಿತೀಯ ಟೆಸ್ಟ್. ತಾಣ; ಕಾನ್ಪುರ
ನ್ಯೂಜಿಲ್ಯಾಂಡ್ ವಿರುದ್ಧ
ಅಕ್ಟೋಬರ್-16 ಮೊದಲ ಟಿ20. ತಾಣ: ಬೆಂಗಳೂರು
ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ
ನವೆಂಬರ್-1 ಮೂರನೇ ಟಿ20. ತಾಣ: ಮುಂಬಯಿ
ಆಸ್ಟ್ರೇಲಿಯಾ ವಿರುದ್ಧ
ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಪಿಂಕ್ ಬಾಲ್ ಟೆಸ್ಟ್)\
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
ಐದನೇ ಟೆಸ್ಟ್: ಜನವರಿ 3-7, ಸಿಡ್ನಿ