Saturday, 23rd November 2024

Rohit Sharma: ಗಣೇಶೋತ್ಸವ ಮೆರವಣಿಗೆಯಲ್ಲಿ ರಾರಾಜಿಸಿದ ರೋಹಿತ್‌ ಶರ್ಮ ಬ್ಯಾನರ್‌

Rohit Sharma

ಆಂಧ್ರ ಪ್ರದೇಶ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ಬಳಿಕ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ(Rohit Sharma) ಅವರ ಕ್ರೇಜ್‌ ಹೆಚ್ಚಾಗಿದೆ. ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ(Ganesh Visarjan) ವೇಳೆ ರೋಹಿತ್‌ ಅಭಿಮಾನಿಗಳು ಟೀಮ್‌ ಇಂಡಿಯಾ ಜೆರ್ಸಿ ತೊಟ್ಟ ರೋಹಿತ್‌ ಅವರ ಬೃಹತ್‌ ಗಾತ್ರದ ಬ್ಯಾನರ್‌ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದಾರೆ. ಈ ವಿಡಿಯೊ ವೈರಲ್‌(viral video) ಆಗಿದೆ.

ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು. ಈ ವಿಚಾರವನ್ನು ಅವರು ಹಿಂದೊಮ್ಮೆ ಸಂದರ್ಶನದಲ್ಲಿಯೂ ಹೇಳಿದ್ದರು. ತಾಯಿಯ ಜತೆ ಮನೆಯಲ್ಲಿ ತೆಲುಗು ಭಾಷೆಯನ್ನೇ ಮಾತನಾಡುತ್ತೇನೆ ಎಂದಿದ್ದರು. ರೋಹಿತ್​ ತಾಯಿ ವೈಜಾಗ್​ನವರು. ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಹೈದರಾಬಾದ್‌ಗೆ ಬಂದಿದ್ದ ರೋಹಿತ್‌ ನೆರದಿದ್ದ ಅಭಿಮಾನಿಗಳ ಜತೆ ತೆಲುಗಿನಲ್ಲೇ ಮಾತನಾಡಿದ್ದ ವಿಡಿಯೊ ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ Rohit Sharma: ಬಾಂಗ್ಲಾ ಟೆಸ್ಟ್‌ ಸರಣಿಗಾಗಿ ಕಠಿಣ ಅಭ್ಯಾಸ ಆರಂಭಿಸಿದ ನಾಯಕ ರೋಹಿತ್‌

ಸದ್ಯ ರೋಹಿತ್‌ ಸೆಪ್ಟೆಂಬರ್‌ 19 ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಚೆನ್ನೈಯಲ್ಲಿ ತಂಡದ ಸಹ ಆಟಗಾರರ ಜತೆ ಅಭ್ಯಾಸ ನಡೆಸುತ್ತಿದ್ದಾರೆ. ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್‌ ಏಕದಿನ ಮತ್ತು ಟೆಸ್ಟ್‌ ಮಾದರಿಯ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ರೋಹಿತ್‌ ಇದುವರೆಗೆ 59 ಟೆಸ್ಟ್‌ ಪಂದ್ಯ ಆಡಿ 4138 ರನ್‌ ಗಳಿಸಿದ್ದಾರೆ. 1 ದ್ವಿಶತಕ ಮತ್ತು 12 ಶತಕ, 17 ಅರ್ಧಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನವೇ ರೋಹಿತ್‌ ಶ್ರೇಯಾಂಕದಲ್ಲಿ ಪಗತಿ ಸಾಧಿಸಿದ್ದು ಅವರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಏಕದಿನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ರೋಹಿತ್‌ 2ನೇ ಸ್ಥಾನಿಯಾಗಿದ್ದಾರೆ.

ಮೊದಲ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.