ಜೋಹನ್ಸ್ಬರ್ಗ್: ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ (Rohit Sharma) ಶುಕ್ರವಾರ (ನವೆಂಬರ್ 15) ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರು ವಿಶೇಷ ಸಂದೇಶ ಕಳುಹಿಸಿದ್ದಾರೆ.
ರೋಹಿತ್ ಶರ್ಮಾ ಹಾಗೂ ರಿತಿಕಾ ಸಾಜ್ದೇ ದಂಪತಿಗೆ 2018ರಲ್ಲಿ ಸಮೈರಾ ಎಂಬ ಹೆಣ್ಣು ಮಗು ಜನಿಸಿತ್ತು. ಆರು ವರ್ಷಗಳ ನಂತರ ಎರಡನೇ ಮಗುವಿಗೆ ತಂದೆಯಾಗಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಹ ಆಟಗಾರರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.
IND vs SA Match Highlights: ಸಂಜು-ತಿಲಕ್ ಶತಕಗಳ ಅಬ್ಬರ, ಟಿ20ಐ ಸರಣಿ ಗೆದ್ದ ಭಾರತ!
ರಿತಿಕಾ ಸಾಜ್ದೇ ಗಂಡು ಮಗುವಿಗೆ ಜನ್ಮ ನೀಡಿರುವ ನಿಮಿತ್ತ ರೋಹಿತ್ ಶರ್ಮಾ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ನಿಮಿತ್ತ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿಲ್ಲ. ಇದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ನಾಲ್ಕು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿಯಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರು, ರೋಹಿತ್ ಶರ್ಮಾಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ.
ನನಗೆ ಅತೀವ ಸಂತಸವಾಗಿದೆ: ತಿಲಕ್ ವರ್ಮಾ
“ನನಗೆ ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ ರೋಹಿತ್ (ಭಾಯ್). ನಾವು ಈ ಕ್ಷಣಕ್ಕಾಗಿಯೇ ತುಂಬಾ ಕಾಯುತ್ತಿದ್ದೆವು. ಮಗು ಜನಿಸುವುದು ಒಂದೆರಡು ದಿನ ತಡವಾಗಿದ್ದರೆ, ನಾನು ಅಲ್ಲಿ ಇರುತ್ತಿದ್ದೆ. ಆದರೆ ಆದಷ್ಟು ಬೇಗ ಮಗುವನ್ನು ನೋಡಲು ಬರುತ್ತೇನೆ,” ಎಂದು ತಿಲಕ್ ವರ್ಮಾ ಹೇಳಿರುವ ವಿಡಿಯೋವನ್ನು ಬಿಸಿಸಿಐ ತಮ್ಮ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದೆ.
Jersey number secret, hairdo and a special message for #TeamIndia Captain @ImRo45 🤗
— BCCI (@BCCI) November 16, 2024
Skipper SKY interviews 'Humble' centurions @IamSanjuSamson & @TilakV9 💯
WATCH 🎥 🔽 #SAvIND | @surya_14kumar
ಜ್ಯೂನಿಯರ್ ಹಿಟ್ಮ್ಯಾನ್ಗೆ ಸ್ವಾಗತ: ಸೂರ್ಯಕುಮಾರ್ ಯಾದವ್
“ನಾವು ಪುಟ್ಟ-ಪುಟ್ಟ ಪ್ಯಾಡ್, ಸೈಡ್ ಆರ್ಮ್ ಹಾಗೂ ಚಿಕ್ಕ ಬ್ಯಾಟ್ನೊಂದಿಗೆ ಜೂನಿಯರ್ ಹಿಟ್ಮ್ಯಾನ್ನನ್ನು ನೋಡಲು ಕಾಯುತ್ತಿದ್ದೇವೆ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ರೋಹಿತ್ ಶರ್ಮಾಗೆ ಶುಭಾಶಯ: ಸಂಜು ಸ್ಯಾಮ್ಸನ್
“ದೊಡ್ಡ ಅಣ್ಣ (ರೋಹಿತ್ ಶರ್ಮಾ) ಹಾಗೂ ಅವರ ಕುಟುಂಬಕ್ಕೆ ಇದು ತುಂಬಾ ತುಂಬಾ ಸಂತಸ ಕ್ಷಣವಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ,” ಎಂದು ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿರುವ ರೋಹಿತ್ ಶರ್ಮಾ
ರಿತಿಕಾ ಸಾಜ್ದೇ ಅವರು ಎರಡನೇ ಮಗುವಿಗೆ ಜನ್ಮ ನೀಡಲಿರುವ ಸಲುವಾಗಿಯೇ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾ ಆಟಗಾರರೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿರಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಮ್ಮ ಎಂದಿನ ಫಾರ್ಮ್ಗೆ ಮರಳುವ ಸಲುವಾಗಿಯೇ ಮುಂಬೈನಲ್ಲೇ ನೆಟ್ ಅಭ್ಯಾಸ ನಡೆಸಿದ್ದರು. ಆದರೆ, ರಿತಿಕಾ ಈಗ ಎರಡನೇ ಮಗುವಿಗೆ ಜನ್ಮ ನೀಡಿರುವುದರಿಂದ ರೋಹಿತ್ ಶರ್ಮಾ ಅವರು ಇನ್ನೆರಡು ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.