India vs Sri Lanka: ಆಗಸ್ಟ್‌ನಲ್ಲಿ ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿ ಸಾಧ್ಯತೆ
India vs Sri Lanka white-ball series: ಮೂಲಗಳ ಪ್ರಕಾರ ಭಾರತ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನಾಡುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಲಂಕಾ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿದೆ. ಲಂಕಾ ಆಟಗಾರರು ಈ ಸಮಯದಲ್ಲಿ ಬಿಡುವು ಹೊಂದಿರುತ್ತಾರೆ. ಹೀಗಾಗಿ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಯೋಜನೆಗೆ ಬಿಸಿಸಿಐ ಮತ್ತು ಲಂಕಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸುತ್ತಿವೆ ಎನ್ನಲಾಗಿದೆ.


ನವದೆಹಲಿ: ಬಾಂಗ್ಲಾದೇಶ ಜತೆಗಿನ ಭಾರತದ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಮುಂದಿನ ತಿಂಗಳು ನಡೆಯಬೇಕಿದ್ದ ಭಾರತದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಲು ಬಿಸಿಸಿಐ ನಿರ್ಧಾರ ತೆಗೆದುಕೊಂಡ ನಂತರ, ಶ್ರೀಲಂಕಾ(India vs Sri Lanka) ಸೇರಿದಂತೆ ಕನಿಷ್ಠ ಎರಡು ಕ್ರಿಕೆಟ್ ಮಂಡಳಿಗಳು ಈ ಅವಧಿಯಲ್ಲಿ ಸೀಮಿತ ಓವರ್‌ಗಳ ಸರಣಿಯನ್ನು ನಡೆಸಲು ಬಿಸಿಸಿಐ(BCCI) ಜತೆ ಪ್ರಸ್ತಾಪಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
"ನಮಗೆ ಕೆಲವು ವಿನಂತಿಗಳು ಬಂದಿವೆ ಮತ್ತು ನಮ್ಮ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ. ಆ ಅವಧಿಯಲ್ಲಿ ಯಾವುದೇ ಕ್ರಿಕೆಟ್ ನಿಯೋಜನೆಗಳನ್ನು ಹೊಂದಿರದ ಕೆಲವು ಮಂಡಳಿಗಳಿವೆ ಮತ್ತು ಆ ವಿಂಡೋದೊಳಗೆ ಭಾರತದೊಂದಿಗೆ ಆಡಲು ಮುಂದಾಗಿವೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಭಾರತ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನಾಡುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಲಂಕಾ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿದೆ. ಲಂಕಾ ಆಟಗಾರರು ಈ ಸಮಯದಲ್ಲಿ ಬಿಡುವು ಹೊಂದಿರುತ್ತಾರೆ. ಹೀಗಾಗಿ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಯೋಜನೆಗೆ ಬಿಸಿಸಿಐ ಮತ್ತು ಲಂಕಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸುತ್ತಿವೆ ಎನ್ನಲಾಗಿದೆ.
ಒಂದೊಮ್ಮೆ ಸರಣಿ ಅಂತಿಮಗೊಂಡರೆ ಆಗ ಟೆಸ್ಟ್ ಮತ್ತು ಟಿ20ಯಿಂದ ನಿವೃತ್ತರಾಗಿರುವ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಆಟ ಮರಳಿ ನೋಡುವ ಅವಕಾಶ ಲಭಿಸಲಿದೆ.
ಇದನ್ನೂ ಓದಿ India tour of Bangladesh: ಟೀಮ್ ಇಂಡಿಯಾದ ಬಾಂಗ್ಲಾ ಪ್ರವಾಸ ರದ್ದು
ಏತನ್ಮಧ್ಯೆ, ಮುಂಬರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯ ಸ್ಥಳಕ್ಕೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ. ಜುಲೈ 24 ರಂದು ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ಸಭೆಯ ಸ್ಥಳ ಬದಲಾವಣೆಗೆ ಬಿಸಿಸಿಐ ಔಪಚಾರಿಕವಾಗಿ ವಿನಂತಿಸಿದೆ ಮತ್ತು ಸ್ಥಳ ಬದಲಾಗದೆ ಉಳಿದರೆ ಸಭೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
"ಬಾಂಗ್ಲಾದೇಶದಲ್ಲಿನ ಪ್ರಚಲಿತ ಪರಿಸ್ಥಿತಿ ಮತ್ತು ರಾಜಕೀಯ ಏರಿಳಿತದ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಪ್ರಯಾಣಿಸುವುದು ಸೂಕ್ತವಲ್ಲ. ಸಭೆಯ ಸ್ಥಳವನ್ನು ಬದಲಾಯಿಸುವಂತೆ ನಾವು ಎಸಿಸಿಗೆ ಅಧಿಕೃತವಾಗಿ ತಿಳಿಸಿದ್ದೇವೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.