India tour of Bangladesh: ಟೀಮ್ ಇಂಡಿಯಾದ ಬಾಂಗ್ಲಾ ಪ್ರವಾಸ ರದ್ದು
"ಸೆಪ್ಟೆಂಬರ್ 2026 ರಲ್ಲಿ ಭಾರತವನ್ನು ಸ್ವಾಗತಿಸಲು ಬಿಸಿಬಿ ಎದುರು ನೋಡುತ್ತಿದೆ. ಪ್ರವಾಸದ ಪರಿಷ್ಕೃತ ದಿನಾಂಕಗಳು ಮತ್ತು ಪಂದ್ಯಗಳನ್ನು ಸಕಾಲದಲ್ಲಿ ಘೋಷಿಸಲಾಗುವುದು" ಎಂದು ಬಾಂಗ್ಲಾದೇಶ ಮಂಡಳಿ ತಿಳಿಸಿದೆ. ಪ್ರವಾಸವು ಆಗಸ್ಟ್ 17 ರಿಂದ 31 ರವರೆಗೆ ನಡೆಯಬೇಕಿತ್ತು.


ನವದೆಹಲಿ: ಆಗಸ್ಟ್ನಲ್ಲಿ ನಿಗದಿಯಾಗಿದ್ದ ತಲಾ 3 ಏಕದಿನ, ಟಿ20 ಪಂದ್ಯಗಳ ಭಾರತ ಮತ್ತು ಬಾಂಗ್ಲಾದೇಶ(IND vs BAN)ನಡುವಣ ವೈಟ್-ಬಾಲ್ ಸರಣಿಯನ್ನು(India tour of Bangladesh) ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ದೃಢಪಡಿಸಿವೆ. ಅದರಂತೆ ಈ ಸರಣಿ 2026ರಕ್ಕೆ ಮುಂದೂಡಲಾಗಿದೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಪ್ರವಾಸವನ್ನು ಮುಂದೂಡಲಾಯಿತು.
"ಅಂತಾರಾಷ್ಟ್ರೀಯ ಕ್ರಿಕೆಟ್ ಬದ್ಧತೆಗಳು ಮತ್ತು ಎರಡೂ ತಂಡಗಳ ವೇಳಾಪಟ್ಟಿಯ ಅನುಕೂಲವನ್ನು ಗಣನೆಗೆ ತೆಗೆದುಕೊಂಡು ಎರಡೂ ಮಂಡಳಿಗಳ ನಡುವಿನ ಚರ್ಚೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಎರಡೂ ಕ್ರಿಕೆಟ್ ಮಂಡಳಿ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ವರ್ಷ ಭಾರತೀಯ ತಂಡವನ್ನು ಸ್ವಾಗತಿಸಲು ನಾನು ಸಿದ್ಧ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ(Aminul Islam) ಹೇಳಿದ್ದಾರೆ.
"ಸೆಪ್ಟೆಂಬರ್ 2026 ರಲ್ಲಿ ಭಾರತವನ್ನು ಸ್ವಾಗತಿಸಲು ಬಿಸಿಬಿ ಎದುರು ನೋಡುತ್ತಿದೆ. ಪ್ರವಾಸದ ಪರಿಷ್ಕೃತ ದಿನಾಂಕಗಳು ಮತ್ತು ಪಂದ್ಯಗಳನ್ನು ಸಕಾಲದಲ್ಲಿ ಘೋಷಿಸಲಾಗುವುದು" ಎಂದು ಬಾಂಗ್ಲಾದೇಶ ಮಂಡಳಿ ತಿಳಿಸಿದೆ. ಪ್ರವಾಸವು ಆಗಸ್ಟ್ 17 ರಿಂದ 31 ರವರೆಗೆ ನಡೆಯಬೇಕಿತ್ತು.
ಇದನ್ನೂ ಓದಿ IND vs ENG: ಶುಭಮನ್ ಗಿಲ್ ಭರ್ಜರಿ ಶತಕ, ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ!
ಹಿಂದುಗಳ ಮೇಲಿನ ದೌರ್ಜನ್ಯದಿಂದ ಭಾರತದ ಜತೆ ಸಂಬಂಧ ಕೆಡಿಸಿಕೊಂಡಿರುವ ಕಾರಣ ಬಾಂಗ್ಲಾ ಜತೆ ಕ್ರಿಕೆಟ್ ಆಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವೆನಿಸಿದೆ. ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಬಿಸಿಸಿಐ ಪ್ರವಾಸವನ್ನು ಮುಂದೂಡಿದೆ. ಆದಾಗ್ಯೂ, ವರ್ಷದ ಪ್ರಮುಖ ಪಂದ್ಯವಾದ ಏಷ್ಯಾಕಪ್ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.