ಶಿಮ್ರೋನ್ ಹೆಟ್ಮೆಯರ್ (59*ರನ್, 36 ಎಸೆತ, 1 ಬೌಂಡರಿ, 6 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಯಜುವೇಂದ್ರ ಚಾಹಲ್ (41ಕ್ಕೆ 4), ಟ್ರೆಂಟ್ ಬೌಲ್ಟ್ (30ಕ್ಕೆ 2) ಮಾರಕ ದಾಳಿ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್ಜೈಂಟ್ಸ್ ಎದುರು 3 ರನ್ಗಳಿಂದ ರೋಚಕ ಜಯ ದಾಖಲಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 6 ವಿಕೆಟ್ಗೆ 165 ರನ್ ಪೇರಿಸಿತು. ಪ್ರತಿಯಾಗಿ ಎಲ್ಎಸ್ಜಿ ತಂಡ 8 ವಿಕೆಟ್ಗೆ 162 ರನ್ಗಳಿಸಿ ಸೋಲೊಪ್ಪಿಕೊಂಡಿತು. ಹ್ಯಾಟ್ರಿಕ್ ಗೆಲುವಿ ನೊಂದಿಗೆ ಬೀಗಿದ್ದ ಲಖನೌ ಮತ್ತೆ ನಿರಾಸೆ ಅನುಭವಿಸಿದರೆ, ರಾಜಸ್ಥಾನ 3ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ರಾಜಸ್ಥಾನ ರಾಯಲ್ಸ್: 6 ವಿಕೆಟ್ಗೆ 165 (ಜೋಸ್ ಬಟ್ಲರ್ 13, ದೇವದತ್ ಪಡಿಕಲ್ 29, ಶಿಮ್ರೋನ್ ಹೆಟ್ಮೆಯರ್ 59*, ಆರ್.ಅಶ್ವಿನ್, 28, ಜೇಸನ್ ಹೋಲ್ಡರ್ 50ಕ್ಕೆ 2, ಕೆ.ಗೌತಮ್ 30ಕ್ಕೆ 2).
ಲಖನೌ ಸೂಪರ್ಜೈಂಟ್ಸ್: 8 ವಿಕೆಟ್ಗೆ 162 (ಕ್ವಿಂಟನ್ ಡಿಕಾಕ್ 39, ದೀಪಕ್ ಹೂಡಾ 25, ಕೃನಾಲ್ ಪಾಂಡ್ಯ 22, ಮಾರ್ಕಸ್ ಸ್ಟೋಯಿನಿಸ್ 38*, ಚಮೀರಾ 13, ಯಜುವೇಂದ್ರ ಚಾಹಲ್ 41ಕ್ಕೆ 4, ಟ್ರೆಂಟ್ ಬೌಲ್ಟ್ 30ಕ್ಕೆ 2).