Saturday, 18th May 2024

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2 ವಿಕೆಟ್​ಗಳ ರೋಚಕ ಗೆಲುವು

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 224 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್ ಕಲೆ ಹಾಕುವ ಮೂಲಕ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಗೆಲುವು ದಾಖಲಿಸುತ್ತಿದ್ದಂತೆ ಇತ್ತ ಅವೇಶ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು.

ಅವೇಶ್ ಖಾನ್ ಅವರು 2 ರಣರೋಚಕ ಪಂದ್ಯಗಳ ಗೆಲುವಿನ ಭಾಗವಾಗಿರುವುದು. ಅದು ಕೂಡ 0 ರನ್​ಗಳೊಂದಿಗೆ ಎಂಬುದು ಇಲ್ಲಿ ಮತ್ತೊಂದು ವಿಶೇಷ.

ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಅವೇಶ್ ಖಾನ್, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 1 ಬೈಸ್​ ರನ್ ಓಡುವ ಮೂಲಕ LSG ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಈ ಗೆಲುವಿನ ಬೆನ್ನಲ್ಲೇ ಹೆಲ್ಮೆಟ್ ಎಸೆದು ಸಂಭ್ರಮಿಸಿ ಸಖತ್ ಟ್ರೋಲ್ ಆಗಿದ್ದರು.

ಇದೀಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಅವೇಶ್ ಖಾನ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಆರ್​ ತಂಡ ರೋಚಕ ಗೆಲುವು ದಾಖಲಿಸುವಾಗ ಸಖತ್ ಆಗಿ ಸಂಭ್ರಮಿಸಿದ್ದಾರೆ.

ಅಂದರೆ ಕೊನೆಯ ಮೂರು ಓವರ್​ಗಳಲ್ಲಿ ಜೋಸ್ ಬಟ್ಲರ್ ಸ್ಟ್ರೈಕ್ ಬದಲಿಸಿರಲಿಲ್ಲ. ಈ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವನ್ನು ಸಖತ್ತಾಗಿ ಸಂಭ್ರಮಿಸಿದ ಅವೇಶ್ ಖಾನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್​ ನೈಸ್ ಆಗಿ ಟ್ರೋಲ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!