Sunday, 15th December 2024

ಸಪ್ತಪದಿ ತುಳಿದ ಕ್ರಿಕೆಟರ್ ರುತುರಾಜ್​ ಗಾಯಕ್ವಾಡ್

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದ ಸ್ಟಾರ್​ ಬ್ಯಾಟರ್​ ರುತುರಾಜ್ ಗಾಯಕ್ವಾಡ್ ಅವರು ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ರುತುರಾಜ್​ ಗಾಯಕ್ವಾಡ್​ಗೆ ಹೂವಿನ ಹಾರ ಹಾಕುತ್ತಿರುವ ಉತ್ಕರ್ಷಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್​ನ ಕೆನ್ನಿಂಗ್ಟನ್ ಓವಲ್ ಮೈದಾನ ದಲ್ಲಿ ಆಸೀಸ್​ ಮತ್ತು ಭಾರತ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಐಪಿಎಲ್​ನಲ್ಲಿ ಮಿಂಚು ಹರಿಸಿದ್ದ ಸಿಎಸ್​ಕೆ ತಂಡದ ಬ್ಯಾಟರ್​ ರುತುರಾಜ್​ ಗಾಯಕ್ವಾಡ್​ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದರು. ಬಳಿಕ ವಿವಾಹ ಕಾರಣಕ್ಕಾಗಿ ತಂಡದಿಂದ ಹೊರಗುಳಿದಿದ್ದರು.

ಮದುವೆಯ ಅದ್ಧೂರಿ ಉಡುಗೆಯಲ್ಲಿ ಕ್ರಿಕೆಟರ್ ಜೋಡಿಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್​, “ಕ್ರಿಕೆಟ್ ಪಿಚ್‌ನಿಂದ ವಿಶೇಷ ವೇದಿಕೆಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಗಿದೆ!” ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು, ಗಣ್ಯರು ಶುಭಾಶಯ ಕೋರಿದ್ದಾರೆ.

ಯುವ ಬ್ಯಾಟರ್​ ಕೈ ಹಿಡಿದಿರುವ ಉತ್ಕರ್ಷ ಪವಾರ್ ವೃತ್ತಿಪರ ಕ್ರಿಕೆಟ್ ಆಟಗಾರ್ತಿ. 24 ವರ್ಷದ ಉತ್ಕರ್ಷ ಪುಣೆ ನಿವಾಸಿಯಾಗಿದ್ದು, ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ಬಲಗೈ ಬ್ಯಾಟರ್​, ಬೌಲರ್ ಆಗಿರುವ ಇವರು 2021 ರಲ್ಲಿ ಲಿಸ್ಟ್ ಎ ಕ್ರಿಕೆಟ್ ಆಡಿದ್ದರು.