Sunday, 13th October 2024

ಮೊದಲ ಟಿ20 ಗೆದ್ದ ದಕ್ಷಿಣ ಆಫ್ರಿಕಾ: ಮಿಂಚಿದ ಮಿಲ್ಲರ್‌, ಡಸ್ಸೆನ್‌

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಮಣಿಸಿ ಮೊದಲ ಜಯ ದಾಖಲಿಸಿದೆ.

ಐದು ಪಂದ್ಯಗಳ ಟಿ-20 ಸರಣಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಡೇವಿಡ್ ಮಿಲ್ಲರ್ ಮಿಂಚಿದ್ದು ಅನುಕ್ರಮವಾಗಿ 75, 64 ರನ್ ಗಳನ್ನು ಗಳಿಸಿ ಭಾರತ ನೀಡಿದ್ದ 211 ರನ್ ಗಳ ಗುರಿಯನ್ನು 19.1 ಓವರ್ ಗಳಿಗೆ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸುಲಭ ಜಯ ದಾಖಲಿಸಿತು.

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಡೇವಿಡ್ ಮಿಲ್ಲರ್ 131 ರನ್ ಗಳ ಜೊತೆಯಾಟ ಕಟ್ಟಿದರು. ಈ ಎರಡು ಆಟಗಾರರನ್ನು ನಿಯಂತ್ರಿ ಸಲು ಭಾರತದ ಬೌಲರ್ ಗಳು ವಿಫಲರಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಇಶಾನ್ ಕಿಶನ್‌ ಅರ್ಧಶತಕ ಬಾರಿಸಿದರೆ, ಕೊನೆಯಲ್ಲಿ ಆಲ್ರೌಂಡರ್‌ ಹಾರ್ದಿಕ್ ಪಾಂಡ್ಯ ಮಿಂಚಿನ ಆಟವಾಡಿ, ತಂಡದ ಮೊತ್ತವನ್ನು 200 ಗಡಿ ದಾಟಿಸಿದರು.