Sunday, 15th December 2024

Sai Sudharsan: ಕೌಂಟಿ ಟೂರ್ನಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಯಿ ಸುದರ್ಶನ್

Sai Sudharsan

ಲಂಡನ್‌:  ಭಾರತದ ಉದಯೋನ್ಮುಖ ಎಡಗೈ ಬ್ಯಾಟರ್‌ ಸಾಯಿ ಸುದರ್ಶನ್(Sai Sudharsan) ಅವರು ಪ್ರಸಕ್ತ ಸಾಗುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ(county cricket) ಚೊಚ್ಚಲ ಶತಕ ಬಾರಿಸಿದ್ದಾರೆ. ನಾಟಿಂಗ್‌ಹ್ಯಾಮ್‌ಶೈರ್(Nottinghamshire) ವಿರುದ್ಧದ ಪಂದ್ಯದಲ್ಲಿ ಸರ್ರೆ(Surrey) ತಂಡದ ಪರ 6ನೇ ಕ್ರಮಾಂಕದಲ್ಲಿ ಆಡಲಿಳಿದ ಸುದರ್ಶನ್, 178 ಎಸೆತಗಳಿಂದ 1 ಸಿಕ್ಸ್ ಹಾಗೂ 10 ಬೌಂಡರಿ ನೆರವಿನಿಂದ 105 ರನ್ ಬಾರಿಸಿದರು. ವಿಶೇಷವೆಂದರೆ ಸಿಕ್ಸರ್‌ ಮೂಲಕವೇ ಅವರು ಶತಕ ಪೂರೈಸಿದರು.

ತಮಿಳುನಾಡು ಮೂಲದ 22 ವರ್ಷದ ಸಾಯಿ ಸುದರ್ಶನ್, ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯವನ್ನಾಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಒಟ್ಟು ಮೂರು ಏಕದಿನ ಪಂದ್ಯಗಳನ್ನಾಡಿ 127 ರನ್‌ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ 25 ಪಂದ್ಯಗಳಿಂದ 1034 ರನ್‌ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 6 ಅರ್ಧಶತಕ ಒಳಗೊಂಡಿದೆ. ಲಿಸ್ಟ್‌ ‘ಎʼ ಪಂದ್ಯದಲ್ಲಿ 28 ಪಂದ್ಯಗಳಿಂದ 1396 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 6 ಆಕರ್ಷಕ ಶತಕ ಒಳಗೊಂಡಿದೆ. ಎಲ್ಲ ಮಾದರಿಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ಅವರು ಭವಿಷ್ಯದಲ್ಲಿ ಭಾರತ ತಂಡದ ಪರ ಅನೇಕ ದಾಖಲೆ ಬರೆಯುವ ಸಾಧ್ಯತೆ ಇದೆ.

https://x.com/surreycricket/status/1829521179759067193

ಭಾರತ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಸಾಯಿ ಸುದರ್ಶನ್(Sai Sudharsan)​ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದಿದ್ದರು. ಅಂದು ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸುದರ್ಶನ್ 43 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ ಅಜೇಯ 55 ರನ್​ ಬಾರಿಸಿದ್ದರು. ಈ ಮೂಲಕ ಭಾರತ ಪರ ಚೊಚ್ಚಲ ಪಂದ್ಯದಲ್ಲೇ ಆರಂಭಿಕ ಆಟಗಾರನಾಗಿ 50 ಪ್ಲಸ್​ ರನ್​ ಬಾರಿಸಿದ 4ನೇ ಆಟಗಾರ ಎನಿಸಿಕೊಂಡಿದ್ದರು.

17ನೇ ಆವೃತ್ತಿಯ ಐಪಿಎಲ್‌ ಟೂನಿಯಲ್ಲಿಸಾಯಿ ಸುದರ್ಶನ್ ಕ್ರಿಕೆಟ್​​ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದರು. ಕಡಿಮೆ ಇನಿಂಗ್ಸ್‌ ಆಡಿ 1000 ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದರು. ಸಚಿನ್‌ 31 ಇನಿಂಗ್ಸ್‌ಗಲ್ಲಿ ಈ ಸಾಧನೆ ಮಾಡಿದ್ದರು.