Saturday, 14th December 2024

Sakshi Dhoni: ಗೆಳತಿಯರ ಜತೆ ಸಿಗರೇಟ್ ಸೇದುತ್ತಿರುವಾಗ ಸಿಕ್ಕಿಬಿದ್ದ ಧೋನಿ ಪತ್ನಿ ಸಾಕ್ಷಿ!

Sakshi Dhoni

ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ಪತ್ನಿ ಸಾಕ್ಷಿ(Sakshi Dhoni) ತಮ್ಮ ಗೆಳೆಯರ ಜತೆ ಗ್ರೀಸ್‌ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಾಕ್ಷಿ ಧೂಮಪಾನ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬೀಜ್‌ ಒಂದರ ಬಳಿ ಇರುವ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಸಾಕ್ಷಿ ಲೈಟರ್‌ನಲ್ಲಿ ಸಿಗರೇಟು ಹಚ್ಚುತ್ತಿರುವ ಫೋಟೊವೊಂದು ವೈರಲ್‌ ಆಗಿದೆ. ಈ ಫೋಟೊ ವೈರಲ್​ ಆಗುತ್ತಿದ್ದಂತೆ ಸಾಕ್ಷಿ ಅವರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಪತಿ ಧೋನಿ ಹುಕ್ಕಾ ಪ್ರಿಯ ನೀವು ಸಿಗರೇಟ್‌ ಪ್ರಿಯೆ ಎಂದು ಕಮೆಂಟ್‌ ಮಾಡಿದ್ದಾರೆ.

https://x.com/RajnilSarma99/status/1829850691650928887

ಕೆಲವು ತಿಂಗಳ ಹಿಂದೆ ಧೋನಿ ಹುಕ್ಕಾ ಸೇದುವ(MS Dhoni smoking hookah) ವಿಡಿಯೊ ವೈರಲ್‌ ಆಗಿತ್ತು. ಕ್ರಿಸ್​ಮಸ್​ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಧೋನಿ ತಮ್ಮ ಪರಿವಾರ ಮತ್ತು ಸ್ನೇಹಿತರೊಂದಿಗೆ ಸೇರಿ ದುಬೈನಲ್ಲಿ ಬೀಡು ಬಿಟ್ಟಿದ್ದರು. ಈ ವೇಳೆ ಅವರು ತಮ್ಮ ಗೆಳೆಯರೊಂದಿಗಿನ ಪಾರ್ಟಿಯಲ್ಲಿ ಹುಕ್ಕಾ ಸೇದಿದ್ದರು. ಇದನ್ನು ಅಲ್ಲಿದ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಧೋನಿ ವಿಪರೀತ ಹುಕ್ಕಾ ಸೇದುತ್ತಾರೆ ಎಂದು ಹಿಂದೊಮ್ಮೆ ಐಪಿಎಲ್‌ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಹೇಳಿದ್ದರು. ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುವ ವೇಳೆ ಧೋನಿ ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ಆದರೆ ಬೈಲಿಯ ಈ ಮಾತನ್ನು ಅಂದು ಯಾರು ಕೂಡ ನಂಬಿರಲಿಲ್ಲ. ಬೈಲಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು.

2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು.  ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ. ಇತ್ತೀಚೆಗೆ ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದರು. ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದ್ದರು.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು.  ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.