Sunday, 15th December 2024

Samit Dravid: ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡದಲ್ಲೇ ಖುಷಿ ಹಂಚಿಕೊಂಡ ಸಮಿತ್ ದ್ರಾವಿಡ್

Samit Dravid

ಬೆಂಗಳೂರು: ಅಂಡರ್‌-19 ಭಾರತ ತಂಡಕ್ಕೆ ಆಯ್ಕೆಯಾಗಿರುವ ಭಾರತದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌(Samit Dravid)ತಮ್ಮ ಆಯ್ಕೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಲ್ಲೇ ಮಾತು ಆರಂಭಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ. ‘ಎಲ್ಲಾ ಕನ್ನಡಿಗರಿಗೂ ನಮಸ್ಕಾರ, ಮೊದಲನೆಯದಾಗಿ, ನಾನು ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಕ್ಷಣಕ್ಕಾಗಿ ನಾನು ತುಂಬಾ ಪರಿಶ್ರಮಪಟ್ಟಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಧನ್ಯವಾದಗಳುʼ  ಎಂದು ಸಮಿತ್ ದ್ರಾವಿಡ್ ಹೇಳಿದ್ದಾರೆ.

ಆಲ್‌ರೌಂಡರ್‌ ಆಗಿರುವ ಸಮಿತ್‌ ಭಾನುವಾರವಷ್ಟೇ ಮುಕ್ತಾಯ ಕಂಡಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಮೈಸೂರು ವಾರಿಯರ್ಸ್‌ ತಂಡದ ಸದಸ್ಯನಾಗಿದ್ದರು. ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ 7 ಪಂದ್ಯಗಳನ್ನಾಡಿ 82 ರನ್ ಬಾರಿಸಿದ್ದರು.  18 ವರ್ಷದ ಸಮಿತ್‌ ಈ ಹಿಂದೆ ಆಡಿದ್ದ ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಕಂಡಿದ್ದ ಯಶಸ್ಸು ಮಹಾರಾಜ ಟ್ರೋಫಿಯಲ್ಲಿ ಸಿಗಲಿಲ್ಲ. ಕೂಚ್‌ ಬೆಹಾರ್‌ ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ 362 ರನ್‌ ಹಾಗೂ ಬೌಲಿಂಗ್‌ನಲ್ಲಿ 16 ವಿಕೆಟ್‌ ಪಡೆದಿದ್ದರು.

ಭಾರತ ಅಂಡರ್ 19 ಏಕದಿನ ತಂಡ

ರುದ್ರ ಪಟೇಲ್ (ಗುಜರಾತ್), ಸಾಹಿಲ್ ಪರಾಖ್ (ಮಹಾರಾಷ್ಟ್ರ), ಕಾರ್ತಿಕೇಯ ಕೆಪಿ (ಕರ್ನಾಟಕ), ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ)
ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಸಮಿತ್ ದ್ರಾವಿಡ್ (ಕರ್ನಾಟಕ), ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ)
ಸಮರ್ಥ ಎನ್ (ಕರ್ನಾಟಕ), ನಿಖಿಲ್ ಕುಮಾರ್ (ಚಂಡೀಗಢ), ಚೇತನ್ ಶರ್ಮಾ (ರಾಜಸ್ಥಾನ್), ಹಾರ್ದಿಕ್ ರಾಜ್ (ಕರ್ನಾಟಕ), ರೋಹಿತ್ ರಾಜಾವತ್ (ಮಧ್ಯ ಪ್ರದೇಶ)
ಮೊಹಮ್ಮದ್ ಇನಾನ್ (ಕೇರಳ).

https://x.com/StarSportsKan/status/1829958109059825708

ಟೆಸ್ಟ್‌ ತಂಡ

ವೈಭವ್ ಸೂರ್ಯವಂಶಿ (ಬಿಹಾರ), ನಿತ್ಯ ಪಾಂಡ್ಯ (ಬಿಹಾರ), ವಿಹಾನ್ ಮಲ್ಹೋತ್ರಾ (ಪಂಜಾಬ್), ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ), ಕಾರ್ತಿಕೇಯ ಕೆಪಿ (ಕರ್ನಾಟಕ)
ಸಮಿತ್ ದ್ರಾವಿಡ್ (ಕರ್ನಾಟಕ), ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಚೇತನ್ ಶರ್ಮಾ (ರಾಜಸ್ಥಾನ್),
ಸಮರ್ಥ್ ಎನ್ (ಕರ್ನಾಟಕ), ಆದಿತ್ಯ ರಾವತ್ (ಉತ್ತರಾಖಂಡ್), ನಿಖಿಲ್ ಕುಮಾರ್ (ಚಂಡೀಗಢ್), ಅನ್ಮೋಲ್ಜೀತ್ ಸಿಂಗ್ (ಪಂಜಾಬ್), ಆದಿತ್ಯ ಸಿಂಗ್ (ಉತ್ತರ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ).

ವೇಳಾಪಟ್ಟಿ

ಸೆಪ್ಟೆಂಬರ್ 21, ಮೊದಲ ಏಕದಿನ, ಸ್ಥಳ: ಪುದುಚೇರಿ, ಸಮಯ ಬೆಳಗ್ಗೆ 9:30

ಸೆಪ್ಟೆಂಬರ್ 23, ಎರಡನೇ ಏಕದಿನ, ಸ್ಥಳ: ಪುದುಚೇರಿ, ಬೆಳಗ್ಗೆ 9:30

ಸೆಪ್ಟೆಂಬರ್ 26, ಮೂರನೇ ಏಕದಿನ, ಸ್ಥಳ: ಪುದುಚೇರಿ, ಬೆಳಗ್ಗೆ 9:30

ಸೆಪ್ಟೆಂಬರ್ 30, ಅಕ್ಟೋಬರ್ 3 ಮೊದಲ ಟೆಸ್ಟ್ (4 ದಿನ) ಚೆನ್ನೈ, ಬೆಳಗ್ಗೆ 9:30

ಅಕ್ಟೋಬರ್ 3 – ಅಕ್ಟೋಬರ್ 10 ಎರಡನೇ ಟೆಸ್ಟ್ (4 ದಿನ) ಚೆನ್ನೈ, ಬೆಳಗ್ಗೆ 9:30